ಸೋಮವಾರಪೇಟೆ ಡಿ.25 : ಸೋಮವಾರಪೇಟೆ ಸಮೀಪದ ಅಬ್ಬೂರುಕಟ್ಟೆಯ ಸಂತ ಲಾರೆನ್ಸ್ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರು ಸೋಮವಾರ ಕ್ರಿಸ್‌ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಭಾನುವಾರ ರಾತ್ರಿ 8ಕ್ಕೆ ಚರ್ಚ್ ಆವರಣದಲ್ಲಿ ಬಾಲ ಎಸುವನ್ನು ಗೋದಾಲಿಯಲ್ಲಿ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಚರ್ಚ್ನಲ್ಲಿ ಗಾಯನ ಆಡಂಬರ ಬಲಿಪೂಜೆ ನಡೆಯಿತು. ಕ್ರೈಸ್ತರೆಲ್ಲರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಫಾದರ್ ಜಾನ್ ಡಿಕೂನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಎಂ. ಡಿಸಿಲ್ವ ಸೇರಿದಂತೆ ಹಲವರು ಇದ್ದರು.











