ನಾಪೋಕ್ಲು ಡಿ.26 : ಉತ್ತಮ ಶಿಕ್ಷಣದಿಂದ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂದು ಕಕ್ಕಬ್ಬೆ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆಟೊಳಿರ ಪಿ.ಕುಟ್ಟಪ್ಪ ಹೇಳಿದರು.
ಕಕ್ಕಬ್ಬೆ ವಿದ್ಯಾ ಸಂಸ್ಥೆಯಲ್ಲಿ ಜರುಗಿದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲೂ ಹೆಚ್ಚಿನ ಆಸಕ್ತಿ ವಹಿಸಿ ಮುಂದುವರಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅತಿಥಿಗಳಾಗಿ ಕಕ್ಕಬೆ ಗ್ರಾ.ಪಂ ಅಧ್ಯಕ್ಷ ಪೊಂಗೇರ ಶಿಲ್ಪ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದರು.ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಪಯಡಿ ಹಂಸ ಬಾತ್ಮಿದಾರರಾದ ಕಲ್ಯಾಟಂಡ ಸುಧಾ ಗಣಪತಿ, ನಿರ್ದೇಶಕರಾದ ಪರದಂಡ ಸದಾ ನಾಣಯ್ಯ, ಚೋಯಮಾಡ0ಡ ನಾಣಯ್ಯ, ಅಂಜಪರವಂಡ ಎ.ಕುಶಾಲಪ್ಪ ಇನ್ನಿತರರು ಹಾಜರಿದ್ದರು.
ಗಣ್ಯರು ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು.
ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ನಡೆದ ಸಾಮೂಹಿಕ ಅಂಗಸಾಧನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಡಿ.ಅನಿಲ್ ರಾಜ್ ಶಾಲಾ ವರದಿ ವಾಚಿಸಿದರು. ಪ್ರಾಥಮಿಕ ಶಾಲಾ ವಿಭಾಗದ ವರದಿಯನ್ನು ಶಿಕ್ಷಕಿ ಕೆ.ಬಿ.ಲೀಲಾವತಿ ವಾಚಿಸಿದರು. ಶಿಕ್ಷಕಿ ಬಬಿತ ಕಾರ್ಯಕ್ರಮ ನಿರೂಪಿಸಿ ಎ.ಎ.ಕುಶಾಲಪ್ಪ ಸ್ವಾಗತಿಸಿ ವಂದಿಸಿದರು .
ವರದಿ : ದುಗ್ಗಳ ಸದಾನಂದ








