ಮಡಿಕೇರಿ ಡಿ.26 : ಕುಶಾಲನಗರ 220/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್ 1 ಹೆಬ್ಬಾಲೆ, ಎಫ್ 2 ಕಾವೇರಿ, ಎಫ್13 ಎಸ್‍ಎಲ್‍ಎನ್ ಮತ್ತು ಎಫ್3 ನಂಜರಾಯಪಟ್ಟಣ ಫೀಢರ್‍ನಲ್ಲಿ ವಾಲ್ ಎಂಟ್ರಿ ಬುಶಿಂಗ್ ಮತ್ತು ಪಾಟ್‍ಹೆಡ್ ರಿಲೆಗಳು ಹಾನಿಗೊಂಡಿದ್ದು, ತುರ್ತಾಗಿ ಮರುಜೋಡಣೆ ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ದಿನಾಂಕ 27.12.20233ರಂದು ಬೆಳಿಗ್ಗೆ 10:00ರಿಂದ ಸಂಜೆ 5:00 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಸಿದ್ದಲಿಂಗಪುರ, ಬಸಿರುಗುಪಗಪ್ಪೆ, ದೊಡ್ಡಳುವಾರ ಅರಶಿಣಗುಪ್ಪೆ, ಬೈರಪ್ಪನಗುಡಿ, ಅಳುವಾರ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.









