ವಿರಾಜಪೇಟೆ ಡಿ.27 : ವಿರಾಜಪೇಟೆಯ ಮಗ್ಗುಲ ಲಿಟಲ್ ಸ್ಕಾಲರ್ರ್ಸ್ ಅಕಾಡೆಮಿ ಆಂಗ್ಲ ಮಾದ್ಯಮ ಶಾಲೆ ವತಿಯಿಂದ ಜ.6 ರಂದು ಬಿಟ್ಟಂಗಾಲದಲ್ಲಿ ಪ್ರಥಮ ಬಾರಿಗೆ ಸಾಂಸ್ಕೃತಿಕ ಉತ್ಸವ ಮತ್ತು ಪ್ರತಿಭಾನ್ವೇಷಣೆ ಕಾರ್ಯಕ್ರಮ “ಚಿಣ್ಣರ ಕಲಾ ಕೂಟ” ನಡೆಯಲಿದೆ ಎಂದು ಲಿಟಲ್ ಸ್ಕಾಲರ್ರ್ಸ್ ಅಕಾಡೆಮಿ ಆಂಗ್ಲ ಮಾದ್ಯಮ ಶಾಲೆ ಅಧ್ಯಕ್ಷರಾದ ಪೂಜಾ ಸಜೇಶ್ ಹೇಳಿದರು.
ಶಾಲೆಯ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಲಿಟಲ್ ಸ್ಕಾಲರ್ಸ್ ಅಕಾಡೆಮಿ ಆಂಗ್ಲ ಮಾದ್ಯಮ ಶಾಲೆ ಮತ್ತು ಇಂಟೋಪೀಸ್ ಡಾನ್ಸ್ ಸ್ಟುಡಿಯೊ ಸಂಸ್ಥೆಯ ಜಂಟಿ ಆಶ್ರಯದಲ್ಲಿ
ಜ.6 ರಂದು ಬಿಟ್ಟಂಗಾಲದಲ್ಲಿರುವ ಯಜ್ನ ಟವರ್ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಎಲ್.ಕೆ.ಜಿಯಿಂದ ಯು.ಕೆ.ಜಿವರೆಗೆ ಪಾಶ್ಚಾತ್ಯ ಫ್ಯಾಷನ್ ಶೋ, ಸ್ಪರ್ಧೆ 1-4ನೇ ತರಗತಿವರೆಗೆ ರೇಟ್ರೋ ನೃತ್ಯ ಸ್ಪರ್ಧೇ, 5-7ನೇ ತರಗತಿವರೆಗೆ ಜನಪದ ನೃತ್ಯ ಗುಂಪು ಸ್ಪರ್ಧೆ ಮತ್ತು 8-10ನೇ ತರಗತಿವರೆಗೆ ಸಾಂಪ್ರದಾಯಿಕ ಉಡುಗೆಯೊಂದಿಗೆ ಫ್ಯಾಷನ್ ಶೋ ಸ್ಪರ್ಧೆಗಳು ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ ಎಂದರು.
ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವ ಮಜಾ ಟಾಕೀಸ್ ಖ್ಯಾತಿಯ ರೆಮೋ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಲಿಟಲ್ ಸ್ಕಾಲರ್ರ್ಸ ಅಕಾಡೆಮಿಯ ಕಾರ್ಯದರ್ಶಿ ಪ್ರತಿಮಾ ರಂಜನ್ ಮಾತನಾಡಿ, ವಾರ್ಷಿಕೋತ್ಸವ ಎಂಬುದು ಒಂದು ಶಾಲೆಗೆ ಮಾತ್ರ ಸೀಮಿತವಾಗದೆ. ವಿವಿಧ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕು. ಶಾಲೆಯ ಆಡಳಿತ ಮಂಡಳಿಯ ಪರಿಕಲ್ಪನೆ ಪರಿಸರ, ಸಾಮಾಜಿಕ ಕಳಕಳಿಯಾಗಿದೆ. ಕೊಡಗಿನ ವಿವಿಧ ಭಾಗಗಳಿಂದ 33 ಮಂದಿ ನೋಂದಾಯಿಸಿಕೊಂಡಿದ್ದಾರೆ. ಜ.5 ರ ವರೆಗೆ ಮುಕ್ತವಾಗಿ ಕಾರ್ಯಕ್ರಮದ ಸ್ಪರ್ಧೆಗಳಿಗೆ ನೊಂದಾಯಿಸಲಾಗುತ್ತದೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದರು.
ಗೋಷ್ಟಿಯಲ್ಲಿ ಇಂಟೋಪೀಸ್ ಡಾನ್ಸ್ ಸಂಸ್ಥೆಯ ವಿಷ್ಣು, ನೃತ್ಯ ತರಬೇತಿದಾರರಾದ ಮಧನ್ ಉಪಸ್ಥಿತರಿದ್ದರು.