ಮಡಿಕೇರಿ ಡಿ.27 : ಎಲ್ಲರೂ ಒಗ್ಗೂಡುವ ಮೂಲಕ ಕ್ರೀಡೆಯಿಂದ ಸೌಹಾರ್ದತೆ ಬೆಳೆಯಲಿ ಎಂದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಎಸ್.ಐ ಪಿ.ಜಿ.ರಾಘವೇಂದ್ರ ಅಭಿಪ್ರಾಯಪಟ್ಟರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲುಗುಂದ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿ ಸಂಘ, ಭಗವತಿ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಗವತಿ ಫುಟ್ಬಾಲ್ ಕಪ್ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡೆಯಲ್ಲಿ ಯಾರೂ ಕೂಡ ದ್ವೇಷ ಬೆಳೆಸಬಾರದು. ಸೌಹಾರ್ದತೆಯಿಂದ ಭಾಗವಹಿಸಬೇಕೆಂದು ಸಲಹೆ ನೀಡಿದರು.
ವೈಷ್ಣವಿ ಯುವಕ ಸಂಘ ಮರಗೋಡು ಎ ಹಾಗೂ ಚೌಡೇಶ್ವರಿ ಅಮ್ಮತ್ತಿ ತಂಡಗಳ ನಡುವೆ ನಡೆದ ಉದ್ಘಾಟ ನಾ ಪಂದ್ಯದಲ್ಲಿ 3-2 ಗೋಲುಗಳ ಅಂತರದಿಂದ ವೈಷ್ಣವಿ ತಂಡ ಗೆಲುವು ಸಾಧಿಸಿತು.
ಎರಡನೇ ಪಂದ್ಯವು ಚಾಮುಂಡಿ ಎಫ್.ಸಿ ಒಂಟಿಯಂಗಡಿ ಹಾಗೂ ಸ್ಕಿಪ್ಪರ್ಸ್ ಎಫ್.ಸಿ ಪೊನ್ನಂಪೇಟೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಒಂಟಿಯಂಗಡಿ ತಂಡವು 5-1 ಗೋಲುಗಳ ಅಂತರದಿಂದ ಗೆಲುವು ಪಡೆಯಿತು.ಮೂರನೇ ಪಂದ್ಯವು ಕ್ಯಾಪ್ಟನ್ಸ್ 11 ಪಾಲಿಬೆಟ್ಟ ಹಾಗೂ ಆಕ್ಸ್‌ಫರ್ಡ್ ಎಫ್.ಸಿ ವಿರಾಜಪೇಟೆ ತಂಡಗಳ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಿಂದ ಕ್ಯಾಪ್ಟನ್ಸ್ 11 ತಂಡ ಗೆಲುವು ಸಾಧಿಸಿತು.
ಉದ್ಘಾಟನಾ ಸಮಾರಂಭ ಅಧ್ಯಕ್ಷತೆಯನ್ನು ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮೇಕೇರಿರ ವಿಜಯ್ ಪೂಣಚ್ಚ ವಹಿಸಿದ್ದರು.
ಈ ಸಂದರ್ಭ ವೇದಿಕೆಯಲ್ಲಿ ಹಾಲುಗುಂದ ಗ್ರಾ.ಪಂ ಪ್ರಭಾರ ಅಭಿವೃದ್ಧಿ ಅಧಿಕಾರಿ ಉಜ್ಮಾ ಜಬೀನ್, ಗ್ರಾ.ಪಂ ಉಪಾಧ್ಯಕ್ಷೆ ಎಂ.ಎಸ್.ಆಮೀನಾ , ಗ್ರಾ.ಪಂ ಮಾಜಿ ಅಧ್ಯಕ್ಷೆ ವೈ.ಬಿ.ಸೀತಮ್ಮ , ಚೆಲ್ಲಿಯಂಡ ತಾಯಮ್ಮ, ಊರು ತಕ್ಕರಾದ ಎಂ.ಎಂ.ನಾಣಯ್ಯ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಹಾಜರಿದ್ದರು.
ಹಾಲುಗುಂದ ಗ್ರಾ.ಪಂ ಅಧ್ಯಕ್ಷ ಪಂದಿಕಂಡ ದಿನೇಶ್ ಸ್ವಾಗತಿ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ.ನಾಗೇಶ್ (ಈಶ್ವರ್) ಕಾರ್ಯಕ್ರಮ ನಿರೂಪಿಸಿದರು.
ವರದಿ : ಕೆ.ಎಂ ಇಸ್ಮಾಯಿಲ್ ಕಂಡಕರೆ