ಮಡಿಕೇರಿ ಡಿ.27 : ಸೋಮವಾರಪೇಟೆ ಪಂಚಾಯ್ತಿಯ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಂಗಳವಾರ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅಂತಿಮ ನಿರ್ಣಯಕ್ಕೆ ಬರಲಾಗದ ಹಿನ್ನೆಲೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ನಿರ್ಣಯ ಕೈಗೊಳ್ಳಲಾಯಿತು.
ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ಸದಸ್ಯರು ದೂರು ನೀಡಿದ ಹಿನ್ನಲೆಯಲ್ಲಿ ಡಿ.21ರಂದು ನಡೆಯಬೇಕಾಗಿದ್ದ ಹರಾಜನ್ನು ಸ್ಥಗಿತಗೊಳಿಸಿ ಏಳು ದಿನಗಳ ನೋಟಿಸ್ ನೀಡಿ, ಸಭೆ ನಡೆಸಿ ದಿನಾಂಕ ನಿಗದಿ ಗೊಳಿಸುವಂತೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದು ವಿಶೇಷ ಸಾಮಾನ್ಯ ಸಭೆ ನಡೆಯಿತಾದರು ಅಧಿಕಾರಿಗಳು ಮತ್ತು ಸದಸ್ಯರು ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.
ಸಭೆಯ ಆರಂಭದಲ್ಲೆ ಸದಸ್ಯರು, ಕಳೆದ ಸೆ.13ರಂದು ನಡೆದ ಸಭೆಯಲ್ಲಿ ನಾವು ಮಳಿಗೆ ಹರಾಜು ಮಾಡುವಂತೆ ತಿಳಿಸಿಲ್ಲ. ಹೀಗಿದ್ದೂ ಅಧಿಕಾರಿಗಳು ಹರಾಜು ಮಾಡುವಂತೆ ನಿರ್ಣಯ ಕೈಗೊಂಡಿದ್ದು, ಇದಕ್ಕೆ ನಮ್ಮ ವಿರೋಧವಿದೆ. ಆದ್ದರಿಂದ ಆ ನಿರ್ಣಯವನ್ನು ರದ್ದುಗೊಳಿಸಿ ಎಂದು ಪಟ್ಟು ಹಿಡಿದರು. ಕೊರೋನಾ ಸಂದರ್ಭದಲ್ಲಿ ಅಂಗಡಿ ಮುಚ್ಚಿದ್ದರೂ,ವ್ಯಾಪಾರ ಇಲ್ಲವಾದರೂ ವರ್ತಕರು ಬಾಡಿಗೆ ಕಟ್ಟಿದ್ದಾರೆ. ಸರ್ಕಾರದ ಅಭಿಪ್ರಾಯ ಪಡೆದು ಈಗಿರುವ ವರ್ತಕರನ್ನೆ ಮುಂದುವರೆಸಿ ಸಾಧ್ಯವಿಲ್ಲವಾದರೆ ಒಂದು ವರ್ಷವಾದರೂ ಅವರಿಗೆ ಅವಕಾಶನೀಡಿ ಎಂದು ಒತ್ತಾಯಿಸಿದರು. ಇದಕ್ಕೆ ಒಪ್ಪದ ಆಡಳಿತಾಧಿಕಾರಿ ಎಸ್.ಎನ್. ನರಗುಂದ ಅವರು, ಈಗ ಕೇವಲ ದಿನಾಂಕ ನಿಗದಿ ಬಗ್ಗೆ ಮಾತ್ರ ಮಾತನಾಡಿ. ಬೇರೆ ಚರ್ಚೆ ಬೇಡ ಎಂದು ತಿಳಿಸುವುದರೊಂದಿಗೆ ಚರ್ಚೆಯ ಕಾವೇರಿತು.
ಇದಕ್ಕೆ ಸದಸ್ಯರು ಪ್ರತಿಕ್ರಿಯಿಸಿ, ಹರಾಜು ಪ್ರಕ್ರಿಯೆ ನಡೆಸುವಾಗ ನಮ್ಮನ್ನು ಕೇಳಿದ್ದೀರ, ಪರಿಶಿಷ್ಟ ಜಾತಿ- ಪಂಗಡದವರಿಗೆ ನಿಗದಿಪಡಿಸಿರುವ ಮೀಸಲಾತಿ ಸರಿಯಾಗಿಲ್ಲ.ಸರ್ಕಾರಕ್ಕೆ ಆದಾಯ ಬರಬೇಕು ಎಂದು ಹೇಳುತ್ತೀರಿ ಆದರೆ ಕೇವಲ ಒಂದು ಲಕ್ಷ ಮುಂಗಡ ನಿಗದಿಪಡಿಸಿದ್ದೀರ. ಸಿ.ಕೆ.ಸುಬ್ಬಯ್ಯ ರಸ್ತೆಯ ಮಳಿಗೆಗಳು ಶಿಥಿಲಾವಸ್ಥೆ ತಲುಪಿದೆ. ದುರಸ್ತಿ ಪಡಿಸಿ ಹರಾಜು ಮಾಡಿ ಎಂದು ಆಗ್ರಹಿಸಿದ ಘಟನೆ ನಡೆಯಿತು.
ಇದಕ್ಕೆ ಉತ್ತರಿಸಿದ ಆಡಳಿತಾಧಿಕಾರಿಗಳು, ಈಗ ದಿನಾಂಕ ನಿಗದಿ ಮಾತ್ರ ಎಂದು ತಿಳಿಸಿದರು. ಇದಕ್ಕೆ ಸದಸ್ಯರು, ನಿಮಗೆ ವರ್ತಕರ ಜೀವನಕ್ಕಿಂತ ಹರಾಜು ಹಾಗೂ ದಿನಾಂಕವೇ ಮುಖ್ಯವಾಗಿದೆಯೆಂದು ತೀಕ್ಷ್ಣವಾಗಿ ನುಡಿದ ಘಟನೆ ನಡೆಯಿತು.
ಸದಸ್ಯರ ಯಾವುದೇ ಮಾತಿಗೆ ಆಡಳಿತಾಧಿಕಾರಿಗಳು ಒಪ್ಪದೆ ಜ.4 ರಂದು ಹರಾಜು ನಡೆಸುವುದಾಗಿ ತಿಳಿಸಿದ್ದರಿಂದ, ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಒಮ್ಮತದ ನಿರ್ಣಯ ಸಾಧ್ಯವಾಗಲಿಲ್ಲ.
ಈ ಸಂದರ್ಭ ಸದಸ್ಯರಾದ ಚಂದ್ರು,ಸಂಜೀವ, ಶೀಲಾ ಡಿಸೋಜಾ, ವೆಂಕಟೇಶ್, ಮೋಹಿನಿ ನಾಗರತ್ನ, ಶುಭಕರ, ಮೃತ್ಯುಂಜಯ ಹಾಗೂ ಜೀವನ್, ನಾವು ತಿಳಿಸಿದ ನ್ಯೂನತೆಗಳನ್ನು ಸರಿಪಡಿಸಿ ಹರಾಜು ನಡೆಸಿಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ನಿರ್ಣಯ ಮಾಡಲಾಯಿತು.
ಸಭೆಯಲ್ಲಿ ಮುಖ್ಯಾಧಿಕಾರಿ ನಾಚಪ್ಪ,ವಿಷಯ ಸಂಗ್ರಾಹಕರಾದ ರೂಪ, ರಾಜಸ್ವ ನಿರೀಕ್ಷಕ ಶಕೀಲ್,ಆರೋಗ್ಯ ನಿರೀಕ್ಷಕ ಜಾಸಿಂಖಾನ್ ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*