ಸುಂಟಿಕೊಪ್ಪ, ಡಿ.28 : ಕೊಡಗರಹಳ್ಳಿ ಶಾಂತಿನಿಕೇತನ ನರ್ಸರಿ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವು ಸಂಭ್ರಮದಿಂದ ನಡೆಯಿತು.
ಸಮಾರಂಭದಲ್ಲಿ ಶಾಲೆಯ ಭಾರತೀಯ ಎಜುಕೇಷನಲ್ ಸರ್ವಿಸ್ ಟ್ರಸ್ಟ್ ಕಾರ್ಯದರ್ಶಿ ರಂಜಿತ್ ಕಾರ್ಯಪ್ಪ ಮಾತನಾಡಿ, ಒಂದು ಶಾಲೆಯನ್ನು ನಡೆಸುವುದು ಬಹಳ ಕಷ್ಟದ ಕೆಲಸ. ಆದರೆ ಆಡಳಿತ ಮಂಡಳಿಯ ಸದಸ್ಯರು, ಪೋಷಕರು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಸಮರ್ಪಣ ಮನೋಭಾವದಿಂದ ಶಾಲೆ ಕಳೆದ 16 ವರ್ಷಗಳಿಂದ ಶೇ.100 ರಷ್ಟು ಫಲಿತಾಂಶವನ್ನು ಪಡೆಯುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ತನ್ನದೆಯಾದ ಛಾಪು ಮೂಡಿಸಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ.ಉತ್ತಯ್ಯ, ಶಾಲೆಯಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಸಾಕಷ್ಟು ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವೆಂದು ಹೇಳಿದರು.
ಶಾಲೆಗೆ ಸಂಬಂಧಿಸಿದ ಪ್ರತಿಯೊಬ್ಬರ ತ್ಯಾಗ ಮತ್ತು ದುಡಿಮೆಯಿಂದ ಇದು ಸಾಧ್ಯವಾಗಿದೆ ಎಂದು ನುಡಿದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು.
ಎಜುಕೇಷನ್ ಸೊಸೈಟಿ ಟ್ರಸ್ಟಿಗಳಾದ ಟಾಟು ಚಂಗಪ್ಪ, ಅನಿಲ್ ಪೊನ್ನಪ್ಪ, ಅಜಿತ್‍ಅಪ್ಪಚ್ಚು, ಬಿ.ಡಿ.ಸುಭಾμï ಹಾಜರಿದ್ದರು.
ಶಾಲಾ ವಿದ್ಯಾರ್ಥಿನಿಯರಾದ ನಯನ ತಂಡದವರು ಪ್ರಾರ್ಥಿಸಿದರು. ವಿನೀಶ ಮತ್ತು ಅನುಷ ನಿರೂಪಿಸಿದರು. ನಿಗ್ಮಾ ಸ್ವಾಗತಿಸಿದರು. ದಕ್ಷಿತ ಮತ್ತು ಸಾನಿಕ ವಂದಿಸಿದರು.
ಶಾಲಾ ಮಕ್ಕಳ 30 ತಂಡಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೇರೆದಿದ್ದ ಪೋಷಕರು ಸಾರ್ವಜನಿಕರ ಜನಮನ ಸೂರೆಗೊಳಿಸಿತು.