ಮಡಿಕೇರಿ ಡಿ.28 : ಮಡಿಕೇರಿ ತಾಲ್ಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಬಿ.ಪಿ.ರಾಜೀವಲೋಚನ ಪುನರಾಯ್ಕೆಯಾಗಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ತಾಲ್ಲೂಕು ಸಂಘದ ಮಹಾಸಭೆಯಲ್ಲಿ ರಾಜೀವಲೋಚನ ಅಧ್ಯಕ್ಷರಾಗಿ ಹಾಗೂ ಕೆ.ಬಿ.ಪೂಣಚ್ಚ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಮನು ಉತ್ತಪ್ಪ, ಎಂ.ಕೆ.ಪೂಣಚ್ಚ, ಎನ್.ಡಿ.ಪೂಣಚ್ಚ, ಪಿ.ಬಿ.ಪೂಣಚ್ಚ, ವಿ.ಜಿ.ಮೋಹನ್, ಸದಾಶಿವ ರೈ, ಮೊಯ್ದು, ಕೆ.ಎನ್.ಲೋಹಿತ್, ಪ್ರವೀಣ್, ದೇವರಾಜು ಹಾಗೂ ಬಿ.ವೈ.ರಾಜೇಶ್ ಯಲ್ಲಪ್ಪ ನೇಮಕಗೊಂಡರು.
ಜಿಲ್ಲಾ ಸಂಘದ ಕಾರ್ಯದರ್ಶಿ ವಿ.ಆರ್.ರವಿಕುಮಾರ್, ಖಜಾಂಚಿ ಬಿ.ಕೆ.ರವಿಂದ್ರ ರೈ, ಸಲಹೆಗಾರ ಬಿ.ಬಿ.ಐತ್ತಪ್ಪ ರೈ, ನಿರ್ದೇಶಕ ಅರುಣ್ ಕುಮಾರ್ ಹಾಗೂ ಹಿರಿಯ ಗುತ್ತಿಗೆದಾರ ಬಾಬು ಚುನಾವಣಾ ಉಸ್ತುವಾರಿ ವಹಿಸಿದ್ದರು.
::: ಕಾನೂನು ಹೋರಾಟದ ಎಚ್ಚರಿಕೆ :::
ಬಿ.ಪಿ.ರಾಜೀವಲೋಚನ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಸಂಘದ ಸಭೆಯಲ್ಲಿ ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ ಗುತ್ತಿಗೆದಾರರಿಗೆ ಪಾವತಿಯಾಗದೆ ಇರುವ ಬಗ್ಗೆ ವಿಷಯ ಪ್ರಸ್ತಾಪಿಸಲಾಯಿತು.
ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಿಲ್ ಗಳನ್ನು ಸಲ್ಲಿಸಿ ಹಲವು ತಿಂಗಳುಗಳೇ ಕಳೆದಿದ್ದರು ಹಣ ಬಿಡುಗಡೆಯಾಗುತ್ತಿಲ್ಲವೆಂದು ಗುತ್ತಿಗೆದಾರರು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಪದಾಧಿಕಾರಿಗಳು ಇಲಾಖಾಧಿಕಾರಿಗಳನ್ನು ಭೇಟಿಯಾಗಿ ಶೀಘ್ರ ಹಣ ಬಿಡುಗಡೆಗೆ ಮನವಿ ಸಲ್ಲಿಸಿ ಗಡುವು ನೀಡಲಾಗುವುದು. ನಿಗಧಿತ ಅವಧಿಯೊಳಗೆ ಹಣ ಬಿಡುಗಡೆಯಾಗದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಭೆ ನಿರ್ಣಯ ಕೈಗೊಂಡಿತು.
ಎಲ್ಲಾ ಗುತ್ತಿಗೆದಾರ ಸದಸ್ಯರಿಗೆ ಕಾಮಗಾರಿಗಳು ಸಮಾನವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕೆಂದು ಸದಸ್ಯರು ಸಲಹೆ ನೀಡಿದರು. ಸಂಘದ ನೂತನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.