ವಿರಾಜಪೇಟೆ ಡಿ.28 : ವಿರಾಜಪೇಟೆ ವಿವೇಕ ಜಾಗೃತ ಬಳಗ ಹಾಗೂ ಶ್ರೀಮಂಗಲ ವಿವೇಕ ಜಾಗೃತ ಬಳಗಗಳ ಸಂಯುಕ್ತಾಶ್ರಯದಲ್ಲಿ ಸಂತೋಷ ಕೂಟ ಹಾಗೂ ಸಂವರ್ಧನಾ ಕಾರ್ಯಕ್ರಮ ನಡೆಯಿತು.
ವಿರಾಜಪೇಟೆಯ ಕಾವೇರಿ ಆಶ್ರಮದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳಗದ ಬೆಳವಣಿಗೆಗೆ ಪೂರಕವಾಗಿ ಹಲವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ವಿಸ್ತಾರವಾಗಿ ಡಿವೈನ್ ಪಾರ್ಕ್‍ನ ಹೆಚ್-2 ಹಾಗೂ ಸಿ-2 ಅಧಿಕಾರಿ ಯಶವಂತ ಹಾಗೂ ಎನ್-2 ಅಧಿಕಾರಿ ಶರತ್ ಕುಮಾರ್ ಅವರ ಸಮ್ಮುಖದಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಳಗದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹಲವು ಮನೋರಂಜನೆ ಸ್ಪರ್ಧೆಗಳಲ್ಲಿ ಭಾವಹಿಸಿದರು. ಇದೇ ಸಂದರ್ಭ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭ ಇತ್ತಿಚೆಗೆ ಕೊಡವ ಸಮಾಜದಲ್ಲಿ ದಿವ್ಯತ್ರಯರ ಹಾಗೂ ಪರಮಪೂಜ್ಯ ಡಾಕ್ಟರ್ ಜೀ ಅವರ ಕೃಪೆಯಿಂದ ಸಂಪನ್ನವಾಗಿದ್ದ ಯೋಗ ಪರ್ಯಟನ ಕಾರ್ಯಕ್ರಮಕ್ಕೆ ತಮ್ಮ ತನು ಮನ ಧನ ನೀಡಿ ಸಂಭ್ರಮಕ್ಕೆ ಕಾರಣರಾದ ಎಲ್ಲಾ ವಿವೇಕವೀರರನ್ನು ನೆನೆದು ಅವರ ಸಕಲ ಏಳಿಗೆಗೂ ಭಗವಂತನ ಕೃಪೆ ದೊರೆಯಲಿ ಎಂದು ಪ್ರಾರ್ಥಿಸಿದರರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿವೇಕ ಜಾಗೃತ ಬಳಗದ ಅಧ್ಯಕ್ಷ ಹೆಚ್.ಡಿ ಲೋಕೇಶ್ ಹಾಗೂ ಶ್ರಿಮಂಗಲ ವಿವೇಕ ಜಾಗೃತ ಬಳಗದ ಅಧ್ಯಕ್ಷರಾದ ಸುಮಿತ್ರ, ಬಳಗದ ಹಿರಿಯರಾದ ಭವಾನಿ ಶಂಕರ್, ಶಶಿಕಲಾ ಭಾಸ್ಕರ್, ಕಾಂಗೀರ ರವಿ ಮಾಚಯ್ಯ, ಬಳಗದ ಗುರುಶ್ರಿ ಸಂದೀಪ್, ಶ್ರೀಮಂಗಲ ಬಳಗದ ವಿವೇಕ ಡಿ.ಎಸ್ ಕುಮಾರ್ ಹಾಗೂ ಎರಡು ಬಳಗದ ಎಲ್ಲಾ ಕಾರ್ಯಕರ್ತರು ಪಾಲ್ಗೊಂಡಿದ್ದರು.