ಮಡಿಕೇರಿ,ಡಿ.29 : ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಕೆಲವು ವಾಹನ ಸವಾರರು ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳನ್ನು ಚಾಲನೆ ಮಾಡುತ್ತಿರುವ ಮಾಹಿತಿ ಅರಿತು ಕಾರ್ಯಾಚರಣೆ ನಡೆಸಿದ ಪೊನ್ನಂಪೇಟೆ ಪೊಲೀಸರು ವಾಹನ ಸವಾರರಿಗೆ ದಂಡ ವಿಧಿಸುವುದರ ಮೂಲಕ ಬಿಸಿ ಮುಟ್ಟಿಸಿದರು.
ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಮತ್ತು ಸಿಬ್ಬಂದಿಗಳು ಸೀಟ್ ಬೆಲ್ಟ್ ಧರಿಸದ, ಹೊಗೆ ನಿಯಂತ್ರಣ ದಾಖಲೆ, ಇನ್ಶೂರೆನ್ಸ್, ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡುತ್ತಿದ್ದವರ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು. ಮಾತ್ರವಲ್ಲದೇ ಒಟ್ಟು 15 ರಿಂದ 20 ವಾಹನ ಚಾಲಕರಿಗೆ ದಂಡ ವಿಧಿಸಿದರು. ಕೆಲವರಿಗೆ ಠಾಣಾಧಿಕಾರಿ ನವೀನ್ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದರು.









