ಸುಂಟಿಕೊಪ್ಪ,ಡಿ.29: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ 2023ನೇ ಸಾಲಿನ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಸಭೆಯಲ್ಲಿ ನೊಡೆಲ್ ಅಧಿಕಾರಿಯಾಗಿ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಪಾಲ್ಗೊಂಡಿದ್ದರು.
ಕಳೆದ ಸಾಲಿನ ಗ್ರಮ ಸಭೆಯ ವರದಿ ಮಂಡನೆಯಾದ ನಂತರ ನೆರೆದಿದ್ದ ಗ್ರಾಮಸ್ಥರು ನಿರ್ಣಯವಾದ ಎಷ್ಟು ಕೆಲಸಗಳು ಅನುಷ್ಠಾನಗೊಂಡಿದೆ. ಚೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ ಪಾವತಿಸಲಾಗಿದೆಯೇ ಎಂದು ಇಸಾಕ್‍ಖಾನ್ ಪ್ರಶ್ನಿಸಿದರು.
ಅರ್ಧಭಾಗದಷ್ಟು ಪಾವತಿಸಲಾಗಿದೆ ಮುಂದಿನ ದಿನಗಳಲ್ಲಿ ಪಾವತಿಸಲು ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಕೇಂದ್ರ ಸರಕಾರದ ಜಲಜೀವನ್ ಯೋಜನೆ ಅನುಷ್ಠಾನ ಯಾಕೆ ವಿಳಂಬಗೊಂಡಿದೆ ಇತರೆಡೆಗಳಲ್ಲಿ ಈ ಯೋಜನೆಯು ಅನುಷ್ಠಾನಗೊಂಡಿದೆ. ಸುಂಟಿಕೊಪ್ಪದಲ್ಲಿ ಯಾಕೆ ಅನುಷ್ಠಾನಗೊಂಡಿಲ್ಲವೆಂದು ಬಿ.ಕೆ.ಮೋಹನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿ.ಪಂ ಅಭಿಯಂತರರಾದ ಫಯಾಜ್, ಟೆಂಡರ್ ಪ್ರಕ್ರಿಯೆಯು ನಡೆದಿದು,್ದ ಮುಂದಿನ ದಿನಗಳಲ್ಲಿ ಕಾಮಗಾರಿ ನಿರ್ವಹಿಸಲಾಗುವುದು ಎಂದು ಉತ್ತರಿಸಿದರು.
ಸುಂಟಿಕೊಪ್ಪ ಪಟ್ಟಣದಲ್ಲಿ ಕಸ ವಿಲೇವಾರಿಯು ಸರಿಯಾದ ರೀತಿಯಲ್ಲಿ ನಡೆಸುತ್ತಿಲ. ಕಸವನ್ನು ಸಂಗ್ರಹಿಸುವ ವಾಹನ ಬಾರದ ಹಿನ್ನಲೆ ವಾರಗಟ್ಟಲೇ ಕಸವನ್ನು ಮನೆಗಳಲ್ಲಿ ಸಂಗ್ರಹಿಸಿ ಇಡುವಂತಾಗಿದೆ. ಇದರಿಂದ ಮನೆ ಮಂದಿಗೆ ಸಾಂಕ್ರಮಿಕ ಭಾದಿಸುವ ಸಾಧ್ಯತೆ ಹೆಚ್ಚಾಗಿದೆ. ಕಸದ ವಾಹನದ ಹಾಡು ಮಾತ್ರ ಕೇಳಿಸುತ್ತದೆ ಆದರೆ ವಾಹನ ಬರುತ್ತದೆ ಎಂದು ಆ ಭಾಗದ ನಿವಾಸಿಗಳು ಕಾದು ನಿಂತರೂ ಕಸ ಸಂಗ್ರಹಿಸುವ ವಾಹನ ಬಾರದಿರುವುದರಿಂದ ರಸ್ತೆ ಇಕ್ಕೆಲಗಳಲ್ಲಿ, ಮನೆಯ ಮುಂಭಾಗದಲ್ಲಿ ಕಸ ಸಂಗ್ರಹಗೊಂಡು ಅಸುಚಿತ್ವ ನಿರ್ಮಾಣವಾಗಿದೆ ಎಂದು ದೂರಿದರು.
ಹಿಂದಿನಂತೆ ಕಸದ ತೊಟ್ಟಿಗಳನ್ನು ಅಳವಡಿಸಿ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಹೆಚ್ಚಿನ ಕೂಲಿ ಕಾರ್ಮಿಕ ಮಂದಿಯೇ ನೆಲೆಸಿದ್ದಾರೆ ಕಸಕ್ಕಾಗಿ ತಮ್ಮ ಕೂಲಿ ಕೆಲಸವನ್ನೇ ತ್ಯಜಿಸುವಂತಾಗಿದೆ. ವಾಹನದ ಹಾಡು ಕೇಳಿ ರಸ್ತೆಗೆ ಬಂದು ನೋಡಿ ಕಸದ ವಾಹನ ಬಾರದ ಹಿನ್ನಲೆ ಕೆಲವು ಮಂದಿ ಅಂಗನವಾಡಿ ಕೇಂದ್ರಗಳ ಮುಂದೆ ಇರಿಸಿ ಹೋಗುತ್ತಿದ್ದು ಕಾರ್ಯಕರ್ತೆ ಹಾಗೂ ಸಹಾಯಕಿ ನಿತ್ಯ ಸ್ವಚ್ಚಗೊಳಿಸುವ ಕಾಯವಾಗಿದೆ. ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ ಎಂದು ಬಿ.ಕೆ.ಮೋಹನ್, ಇಬ್ರಾಹಿಂ,ಇಸಾಕ್ ಖಾನ್ ಫೆಲ್ಸಿ ಡೆನ್ನಿಸ್ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ಅಂದಾಜು ಮುಂದಿನ 2 ತಿಂಗಳಲ್ಲಿ ನೂತನ 2 ವಾಹನ ಖರೀದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ವಾಹನಗಳು ಬಂದಲ್ಲಿ ಸಮಸ್ಯೆಯು ಬಗೆಹರಿಯಲಿದೆ ಎಂದರು.
ಆರ್.ಕೆ.ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರ ಹಾಗೂ ಪಂಚಾಯಿತಿ ವಸತಿಗಳು ಅಪಾಯದ ಅಂಚಿನಲ್ಲಿದ್ದು ಆರ್.ಕೆ.ಬಡಾವಣೆ ನಿರ್ಮಾಣದ ಸಂದರ್ಭ ಮಣ್ಣು ತೆರವುಗೊಳಿಸಿದ್ದರಿಂದ ಅವಾಂತರಕ್ಕೆ ಕಾರಣವಾಗಿದೆ ತಡೆಗೋಡೆ ನಿರ್ಮಾಣಕ್ಕೆ ಏನು ಕ್ರಮ ಕೈಗೊಂಡಿದ್ದೀರ ಎಂಬ ಸಾರ್ವಜನಿಕರ ಪ್ರಶ್ನೆಗೆ ಆರ್.ಕೆ. ಬಡಾವಣೆಯಲ್ಲಿ ಮನೆ ನಿರ್ಮಾಣಕ್ಕೆ ಸದ್ಯದ ಮಟ್ಟಿಗೆ ಮನೆಕಟ್ಟಲು ಅನುಮತಿಯನ್ನು ತಡೆಯಿಡಲಾಗಿದೆ. ಮುಂದಿನ ದಿನಗಳಲ್ಲಿ ತಡೆಗೋಡೆಯನ್ನು ಬಡಾವಣೆಯ ಮಾಲೀಕರು ಹಾಗೂ ಜಿಲ್ಲಾಡಳಿತದ ಅನುದಾನದಲ್ಲಿ ನಿರ್ವಹಿಸಲಾಗುವುದು ಎಂದರು.
ಜಿಯಂಪಿ ಶಾಲಾ ಆವರಣದ ಮುಂಭಾಗದಲ್ಲಿ ವ್ಯಾಪಾರ ಮಳಿಗೆಗಳಿಗೆ ಮೈದಾನದಿಂದ ಚೆಂಡು ಬಂದು ಬೀಳುತ್ತಿರುವುದರಿಂದ ಅಂಗಡಿಯ ಗಾಜು ಸೇರಿದಂತೆ ವ್ಯಾಪಾರ ಸಾಮಾಗ್ರಿಗಳು ಹಾನಿಗೀಡಾಗುತ್ತಿದೆ ಇದರಿಂದ ಸಾವಿರಾರು ರೂ ನಷ್ಟ ಉಂಟಾಗುತ್ತಿದ್ದು, ಮೈದಾನಕ್ಕೆ ಗ್ಯಾಲರಿ ನಿರ್ಮಿಸುವಂತೆ ಫೆಲ್ಸಿ ಡೆನ್ನಿಸ್ ಆಗ್ರಹಿಸಿದರು.
2ನೇ ಮತ್ತು 3ನೇ ವಿಭಾಗದಲ್ಲಿ 10 ವರ್ಷದಿಂದ ನ್ಯಾಯಬೆಲೆ ಅಂಗಡಿಗಾಗಿ ಬೇಡಿಕೆಯನ್ನು ಸಲ್ಲಿಸುತ್ತಿದ್ದೇವೆ. ಇಂದಿನವರೆಗೂ ನ್ಯಾಯಬೆಲೆ ತೆರೆದಿಲ್ಲವೆಂದು ಅಸಾಮಾಧಾನ ವ್ಯಕ್ತಪಡಿಸಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಸೋಪು ಖರೀದಿಸುವಂತೆ ಕಡ್ಡಾಯ ಪಡಿಸುತ್ತಿದ್ದಾರೆ ಮತ್ತೆ ಕೆಲವು ನ್ಯಾಯ ಬೆಲೆ ಅಂಗಡಿಗಳು ನಿಗಧಿತ ಸಮಯಕ್ಕೆ ಸರಿಯಾಗಿ ಪಡಿತರ ಸಾಮಾಗ್ರಿಗಳನ್ನು ವಿತರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಅಧಿಕಾರಿ ಶ್ವೇತಾ ಮಾತನಾಡಿ ಅಧಿಕೃತ ನೊಂದಾಯಿತ ಸಂಘಕ್ಕೆ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ ನೀಡುತ್ತೇವೆ. ಈಗಾಗಲೇ ದೂರು ಬಂದ ನ್ಯಾಯಬೆಲೆ ಅಂಗಡಿಗಳ ಮೇಲೆ ಕ್ರಮಕೈಗೊಂಡಿದ್ದೇವೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ನೂತನ ಲೇಜೌಟ್‍ನಲ್ಲಿ ಸುಂಟಿಕೊಪ್ಪ 3 ವರ್ಷಗಳ ಹಿಂದೆ ಮಾರ್ಕೆಟ್ ಕಾಮಗಾರಿಯನ್ನು ನಿರ್ವಹಿಸಲಾಗಿದ್ದು, ಕಾಮಗಾರಿ ಅಪೂರ್ಣಗೊಂಡಿದೆ ಶೀಘ್ರದಲ್ಲಿ ಕಾಮಗಾರಿ ನಿರ್ವಹಿಸುವಂತೆ ಪಟ್ಟಣದ ನಡುವೆ ರಾಷ್ಟ್ರೀಯ ಹೆದ್ದಾರಿಯು ಹಾದುಹೋಗಿದೆ. ವಾರಾಂತ್ಯ ದಿನಗಳಲ್ಲಿ ವಾಹನ ದಟ್ಟಣೆಯು ಹೆಚ್ಚಾಗಿದ್ದು ರಸ್ತೆಯ 2 ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಟ್ಟಡಗಳು ಕೆಲವು ನಿಯಮಗಳನ್ನು ಮೀರಿ ನಿರ್ಮಿಸಲಾಗುತ್ತಿದೆ ಇದರಿಂದ ಮತ್ತಷ್ಟು ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಶಾಲಾ ಮಕ್ಕಳು ಶಾಲೆಗೆ ಬರುವ ಸಂದರ್ಭ ಬಿಡುವ ಸಂದರ್ಭ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಕನ್ನಡ ವೃತ್ತ ಹಾಗೂ ಮಾರುಕಟ್ಟೆ ರಸ್ತೆ ಬಳಿ ಜಿಬ್ರಾಕ್ರಾಸ್ ಅಳವಡಿಸಿ ಬಿ.ಕೆ.ಮೋಹನ್, ಇಬ್ರಾಹಿಂ, ಇಸಾಕ್‍ಖಾನ್ ಶಿಕ್ಷಕಿ ಸೌಭಾಗ್ಯ, ಪೈರೋಜ್ ಖಾನ್, ಸದಸ್ಯ ಪಿ.ಎಫ್.ಸಬಾಸ್ಟೀನ್ ಒತ್ತಾಯಿಸಿದರು.
ಸರಕಾರಿ ಶಾಲೆಗಳಲ್ಲಿ ಆವರಣದಲ್ಲಿ ಸಂಜೆ ಮತ್ತು ರಾತ್ರಿಯ ಅನೈತಿಕ ಚಟುವಟಿಕೆಗಳ ನಡೆಯುತ್ತಿದೆ. ಇದನ್ನು ನಿತ್ಯ ಸ್ವಚ್ಚಗೊಳಿಸುವುದು ಕಾಯಕವಾಗಿದೆ ಮಕ್ಕಳು ಶಾಲೆಗೆ ಬೆಳಿಗ್ಗೆ ಆಗಮಿಸುತ್ತಿದ್ದು ಇದರ ಪರಿವು ಇಲ್ಲದೆ ಇನ್ನಿತರ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಗದ್ದೆಹಳ್ಳ ಸರಕಾರಿ ಪ್ರಾಥಮಿಕ ಶಾಲೆಗೆ ಅಕ್ಷರ ದಾಸೋಹ ಅಡುಗೆಗೂ ನೀರಿನ ಸಮಸ್ಯೆ ತಲೆದೋರಿದೆ ಶಾಲಾ ಮುಖ್ಯೋಪಾದ್ಯಾಯನಿ ಹೇಮಾಕುಮಾರಿ, ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸೌಭಾಗ್ಯ ತಿಳಿಸಿದರು.
ಈ ಬಡಾವಣೆಯೊಂದರಲ್ಲಿ ಪ್ರಥಮವಾಗಿ ಮನೆಯೊಂದನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದೇನೆ ಆದರೆ ಮೂಲಭೂತ ಸೌಲಭ್ಯಗಳಾದ ಚರಂಡಿ, ರಸ್ತೆ, ಬೀದಿ ದೀಪ ಒದಗಿಸಿಕೊಡುವಂತೆ ಬೇಡಿಕೆಯನ್ನು ಹಲವು ವರ್ಷಗಳಿಂದ ಸಲ್ಲಿಸುತ್ತಿದ್ದರೂ ಇಂದಿಗೂ ಮೂಲಭೂತ ಸೌಲಭ್ಯ ದೊರಕಿಲ್ಲವೆಂದು ನೈಜ ಸಮಸ್ಯೆಯ ಗೀತಾ ವಿಜಯ್ ಭಾವಚಿತ್ರ ಹಿಡಿದು ಪ್ರದರ್ಶಿಸಿದರು. ಇದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಕಾಮಗಾರಿ ನಿರ್ವಹಿಸಿಕೊಡುವುದಾಗಿ ತಿಳಿಸಿದರು.
ಇದೇ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆರೋರ್ವರು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭ ಸಾರ್ವಜನಿಕರು ಸದಸ್ಯೆ ಮಾತಿಗೆ ಅಸಾಮಾಧನ ವ್ಯಕ್ತಪಡಿಸಿ ಮಾತನಾಡಲು ಅವಕಾಶ ವೇದಿಕೆಯಲ್ಲಿದ್ದ ಸಭೆಯ ಅಧ್ಯಕ್ಷರ ಬಳಿ ಸೂಚಿಸಿದರು.
ವಿದ್ಯುತ್ ಬಿಲ್ ದುಬಾರಿಯಾಗುತ್ತಿದೆ ಸಾರ್ವಜನಿಕರು ವಿದ್ಯುತ್ ಬಲ್ಲನ್ನು ಪ್ರದರ್ಶಿಸುವ ಚೆಸ್ಕಾಂ ಕಿರಿಯ ಅಭಿಯಂತರರಾದ ಲವಕುಮಾರ್ ಅವರೊಂದಿಗೆ ಈ ಹಿಂದೆ ಕೈನಲ್ಲಿ ಬರೆದುಕೊಡುವಾಗ ಬಿಲ್ ಯಾವುದೇ ರೀತಿಯ ಸಮಸ್ಯೆ ಉಂಟಾಗುತ್ತಿರಲಿಲ್ಲ ಡಿಜಿಟಲೀಕರಣಗೊಂಡ ನಂತರ ಬಿಲ್ ಅಧಿಕಗೊಳ್ಳುತ್ತಿದೆ ಎಂದು ಸಾರ್ವಜನಿಕರು ಚೆಸ್ಕಾಂ ಅಭಿಯಂತರ ಲವಕುಮಾರ್ ಇಲಾಖೆಯ ಮಾಹಿತಿಯನ್ನು ಬಯಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮ ಸಭೆಯ ಮಹತ್ವತೆ ಹಾಗೂ ಸಾಧಕಭಾದಕಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಯಲ್ಲಿರುವ ಇರುವ ಮೂಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮಮಹೇಶ್ ಸದಸ್ಯರಾದಪಿ.ಎಫ್.ಸಬಾಸ್ಟೀನ್, ರಫೀಕ್‍ಖಾನ್, ಆಲಿಕುಟ್ಟಿ, ಪ್ರಸಾದ್‍ಕುಟ್ಟಪ್ಪ, ಶಬೀರ್, ಸೋಮನಾಥ್, ಜೀನಾಸುದ್ದೀನ್, ಮಂಜುನಾಥ, ನಾಗರತ್ನ ಸುರೇಶ್, ಮಂಜುಳ (ರಾಸಥಿ), ವಸಂತಿ, ಹಸೀನಾ, ರೇಷ್ಮ ಗ್ರಾ..ಪಂ.ಲೆಕ್ಕಾಧಿಕಾರಿ ಚಂದ್ರಕಲಾ ಸಿಬ್ಬಂದಿಗಳಾದ ಡಿ.ಎಂ.ಮಂಜುನಾಥ್, ಬಿಲ್ ಕಲೆಕ್ಟರ್ ಶ್ರೀನಿವಾಸ್, ಸಂಧ್ಯಾ ಹಾಗೂ ಪೌರಕಾರ್ಮಿಕರು ಇದ್ದರು.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್‌ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*