ಮಡಿಕೇರಿ ಡಿ.29 : ಕಾಂತೂರು-ಮೂರ್ನಾಡು ಗ್ರಾ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಗೃಹಲಕ್ಷ್ಮಿ ಯೋಜನೆ ಸಮಸ್ಯೆ ನಿವಾರಣೆ ಶಿಬಿರ ನಡೆಯಿತು.
ಕಾಂತೂರು- ಮೂರ್ನಾಡು ಗ್ರಾ.ಪಂ ನಲ್ಲಿ ನಡೆದ ಶಿಬಿರದಲ್ಲಿ ಪ್ರತಿ ದಿನ 50 ರಿಂದ 60 ಮಂದಿ ಮಹಿಳೆಯರ ಗೃಹಲಕ್ಷ್ಮಿ ನೋಂದಣಿ, ಆಧಾರ್, ಇಕೆವೈಸಿ ಮತ್ತು ಬ್ಯಾಂಕಿನಲ್ಲಿ ಆಗಿರುವ ಸಮಸ್ಯೆಯನ್ನು ಸರಿಪಡಿಸಲಾಯಿತು. ಅಲ್ಲದೇ ಅಂಚೆ ಕಚೇರಿಯಲ್ಲಿ ಐಪಿಬಿಪಿ ಖಾತೆ ತೆರೆಯುವ ಮೂಲಕ ಗೃಹಲಕ್ಷ್ಮಿ ಸಮಸ್ಯೆಯನ್ನು ಬಗೆಹರಿಸಲಾಯಿತು.
ಗೃಹಲಕ್ಷ್ಮಿ ನೋಂದಣಿಗಾಗಿ ಹಾಗೂ ಅದನ್ನು ಸರಿ ಪಡಿಸಲು ವಿವಿಧಡೆ ಅಲೆದಾಡುವುದು ತಪ್ಪುತಪ್ಪಿಸಲು ಈ ಶಿಬಿರ ಸಹಕಾರಿಯಾಗಿದೆ ಎಂದು ಫಲಾನುಭವಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತ ಕೀರ್ತನ್ ಮಾರ್ಗದರ್ಶನದಲ್ಲಿ ನಡೆದ ಮೂರು ದಿನಗಳ ಶಿಬಿರದಲ್ಲಿ ಈ ಶಿಬಿರದಲ್ಲಿ ಪಂಚಾಯತ್ ಅಧ್ಯಕ್ಷ ಕುಶನ್, ಅಭಿವೃದ್ಧಿ ಅಧಿಕಾರಿ ಮಾನ್ ಚಂದ್ರಮೌಳಿ ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಬಿ.ಬಿ.ಜಯಂತಿ, ಬಿ.ಆರ್.ಭವ್ಯ, ಪ್ರಮೀಳಾ, ಚೈತ್ರ, ಉಮಾವತಿ, ಸಮೀರಾ ಮತ್ತು ಗ್ರಾ.ಪಂ ಸಿಬ್ಬಂದಿಗಳಾದ ಶಶಿ ಮತ್ತು ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.