ಮಡಿಕೇರಿ ಡಿ.29 : ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಯುವ ಸಪ್ತಾಹದ ಅಂಗವಾಗಿ ಕೊಡಗು ಜಿಲ್ಲೆಯ ಯುವ ಜನರಿಗಾಗಿ “ಸ್ವಾಮಿ ವಿವೇಕಾನಂದರ ಆದರ್ಶಗಳಲ್ಲಿ ಇಂದಿನ ಯುವ ಜನಾಂಗ ಅಳವಡಿಸಿಕೊಳ್ಳಬೇಕಾದ ಅಂಶಗಳು” ಎಂಬ ವಿಷಯದ ಕುರಿತು ಜಿಲ್ಲಾ ಮಟ್ಟದ ಲೇಖನ ಸ್ಪರ್ಧೆ ನಡೆಯಲಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು, ನೆಹರು ಯುವ ಕೇಂದ್ರ ಮಡಿಕೇರಿ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು 30 ವರ್ಷದೊಳಗಿನವರಾಗಿರಬೇಕು, ಲೇಖನದೊಂದಿಗೆ ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿರಬೇಕು. ಟೈಪ್ ಮಾಡಿದ ಲೇಖನ “ಎ4” ಕಾಗದದ ಒಂದೇ ಭಾಗದಲ್ಲಿರಬೇಕು ಮತ್ತು ನಾಲ್ಕು ಪುಟಗಳನ್ನು ಮೀರಬಾರದು. ಲೇಖನಗಳನ್ನು ಜ.10 ರಂದು ಮಧ್ನಾಹ್ನ 3 ಗಂಟೆಯೊಳಗೆ ತಲುಪಿಸಬೇಕು.
ವಿಜೇತರಿಗೆ ಆಕರ್ಷಕ ಟ್ರೋಫಿ, ನಗದು ಬಹುಮಾನ ಹಾಗೂ ದೃಢೀಕರಣ ಪತ್ರವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9481213920, 9845571290 ನ್ನು ಸಂಪರ್ಕಿಸಬಹುದಾಗಿದೆ.
ಅಂಚೆ ಮೂಲಕ ಅಥವಾ ನೇರವಾಗಿ ಪಿ.ಪಿ.ಸುಕುಮಾರ್, ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕೊಡಗು. C/O ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣದ ಸಮೀಪ, ಮಡಿಕೇರಿ, ಈ ವಿಳಾಸಕ್ಕೆ ತಲುಪಿಸುವಂತೆ ಸುಕುಮಾರ್ ತಿಳಿಸಿದ್ದಾರೆ. ಜ.12 ರಂದು ನಡೆಯುವ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಯುವ ಸಪ್ತಾಹ ಕಾರ್ಯಕ್ರಮದ ಸಂದರ್ಭ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.