ವಿರಾಜಪೇಟೆ ಡಿ.30 : ಮೈಸೂರಿನ ಶಾರದಾ ವಿಲಾಸ ಕಾಲೇಜು ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಸ್ಪೋಟ್ರ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್‍ನ ಶಾಸ್ತ್ರಿಯ ನೃತ್ಯ ಸ್ಪರ್ಧೆ ವಿಭಾಗದಲ್ಲಿ ವಿರಾಜಪೇಟೆಯ ಕೆದಮುಳ್ಳುರು ಗ್ರಾಮದ ಧನ್ಯಶ್ರಿ ಮೂರು ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಧನ್ಯಶ್ರೀ ವಿರಾಜಪೇಟೆಯ ಎಸ್.ಎಂ.ಎಸ್ ಪಿಯುಸಿ ಕಾಲೇಜು ಅರಮೇರಿಯಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿನಿಯಾಗಿದ್ದು, ಈಕೆ ವಿರಾಜಪೇಟೆಯ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಸಂಸ್ಥೆಯ ವಿದುಷಿ ಹೇಮಾವತಿ ಕಾಂತರಾಜ್ ಮತ್ತು ಕಾವ್ಯಶ್ರೀ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ. ಮಣಿಕಂಟ ಹಾಗೂ ಕುಮಾರಿ ದಂಪತಿಗಳ ಪುತ್ರಿಯಾಗಿದ್ದಾರೆ.








