Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಭಗವತಿ ಫುಟ್ಬಾಲ್ ಕಪ್ : ಕ್ಯಾಪ್ಟನ್ಸ್ 11 ಪಾಲಿಬೆಟ್ಟ ಚಾಂಪಿಯನ್ಸ್, ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ರನ್ನರ್ಸ್
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಭಗವತಿ ಫುಟ್ಬಾಲ್ ಕಪ್ : ಕ್ಯಾಪ್ಟನ್ಸ್ 11 ಪಾಲಿಬೆಟ್ಟ ಚಾಂಪಿಯನ್ಸ್, ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ರನ್ನರ್ಸ್

ಜನವರಿ 1, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.1 : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲುಗುಂದ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿ ಸಂಘ, ಭಗವತಿ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಲ್ಕು ದಿನಗಳ‌ ಕಾಲ ನಡೆದ ಜಿಲ್ಲಾ ಮಟ್ಟದ ಮುಕ್ತ 7+2 ಜನರ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಕ್ಯಾಪ್ಟನ್ಸ್ 11 ಪಾಲಿಬೆಟ್ಟ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ದ್ವಿತೀಯ ಸ್ಥಾನವನ್ನು ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ತಂಡ ಪಡೆದುಕೊಂಡಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಅಂತಿಮ ಹಣಾಹಣಿಯಲ್ಲಿ ಕ್ಯಾಪ್ಟನ್ಸ್ ‌11 ಪಾಲಿಬೆಟ್ಟ ಹಾಗೂ ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ತಂಡವು ನಿಗದಿತ ಸಮಯದಲ್ಲಿ 2-2 ಗೋಲುಗಳಿಸಿ ಸಮಬಲ ಸಾಧಿಸಿತು.
ಪೆನಾಲ್ಟಿ ಶೂಟೌಟ್ ನಲ್ಲಿ ಕ್ಯಾಪ್ಟನ್ಸ್ ‌11 ತಂಡದ ಗೋಲ್ ಕೀಪರ್ ಮಣಿ ಅವರು ಎರಡು ಪೆನಾಲ್ಟಿ ಹೊಡೆತವನ್ನು ತಡೆಯುವುದರ ಮೂಲಕ ಕ್ಯಾಪ್ಟನ್ಸ್ 11 ಪಾಲಿಬೆಟ್ಟ ತಂಡವು 5-3 ಗೋಲುಗಳ ಅಂತರದಿಂದ ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ಸಾಧಿಸಿ ಭಗವತಿ ಕಪ್ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿತು.
ರನ್ನರ್ಸ್ ಪ್ರಶಸ್ತಿಗೆ ಚಾಮುಂಡಿ ಯುನೈಟೆಡ್ ತಂಡ ತೃಪ್ತಿಪಟ್ಟುಕೊಂಡಿತು.ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯವು ವೈಷ್ಣವಿ ಯುವಕ ಸಂಘ ಮರಗೋಡು ಹಾಗೂ ಕ್ಯಾಪ್ಟನ್ಸ್ 11 ಪಾಲಿಬೆಟ್ಟ ತಂಡಗಳ ನಡುವೆ ನಡೆಯಿತು.
ಕ್ಯಾಪ್ಟನ್ಸ್ 11 ಪಾಲಿಬೆಟ್ಟ ತಂಡವು 4-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಚಾಮುಂಡಿ ಯುನೈಟೆಡ್ ಒಂಟಿಯಂಗಡಿ ಹಾಗೂ ಅಯ್ಯಪ್ಪ ಫ್ರೆಂಡ್ಸ್ ಹಾಲುಗುಂದ ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಚಾಮುಂಡಿ ಯುನೈಟೆಡ್ ತಂಡವು 3-1 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು.
ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ನೋಂದಣಿಗೊಂಡ 16 ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಅತ್ಯುತ್ತಮ ತಂಡದ ಪ್ರಶಸ್ತಿಯನ್ನು ಗಾಂಧಿ ಯುವಕ ಸಂಘ ಕಂಡಕರೆ ಪಡೆದುಕೊಂಡಿತು.
ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿಗೆ ಕ್ಯಾಪ್ಟನ್ಸ್ 11 ತಂಡದ ಮುನ್ನಡೆ ಆಟಗಾರ ಜುನೈದ್ ಭಾಜನರಾದರು.
ಅತ್ಯುತ್ತಮ ಆಟಗಾರ ಪ್ರಶಸ್ತಿ ಚಾಮುಂಡಿ ಯುನೈಟೆಡ್ ತಂಡದ ಪಾಂಡಿಯನ್ ಹಾಗೂ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಅಯ್ಯಪ್ಪ ಫ್ರೆಂಡ್ಸ್ ತಂಡ ರಾಖಿ ಪಡೆದುಕೊಂಡರು.

ಮಹಿಳೆಯರ ಪ್ರದರ್ಶನ ಪಂದ್ಯಾಟ, ಲಯನ್ಸ್ ವಿದ್ಯಾಸಂಸ್ಥೆಗೆ ಗೆಲುವು:

ಭಗವತಿ ಕಪ್ ಫುಟ್ಬಾಲ್ ‌ಪಂದ್ಯಾವಳಿಯು ಫೈನಲ್ ಪಂದ್ಯದ ಮೊದಲು ಲಯನ್ಸ್ ವಿದ್ಯಾಸಂಸ್ಥೆ ಗೋಣಿಕೊಪ್ಪ ಹಾಗೂ ‌ಮರಗೋಡು ಎಫ್.ಸಿ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು.
4-0 ಗೋಲುಗಳ ‌ಅಂತರದಿಂದ ಲಯನ್ಸ್ ವಿದ್ಯಾಸಂಸ್ಥೆ ಗೆಲುವು ಪಡೆಯಿತು.
ಕಳೆದ ನಾಲ್ಕು ದಿನಗಳ ನಡೆದ ಭಗವತಿ ಫುಟ್ಬಾಲ್ ಕಪ್ ‌ನಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ಇಮ್ರಾನ್ ಖಾನ್ ಹುಬ್ಬಳ್ಳಿ, ದರ್ಶನ್ ಸುಕುಮಾರ್ ಮರಗೋಡು ಹಾಗೂ ಗೇಬ್ರಿಯಲ್ ಬೆಳಗಾವಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ದಶಕಗಳ ಬಳಿಕ‌ ಕೊಡಗಿನಲ್ಲಿ ನೋಂದಾಯಿತ ಕೊಡಗಿನ ತಂಡಗಳ ನಡುವೆ ಕಾಲ್ಚೆಂಡು:

ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ‌ನಲ್ಲಿ ನೋಂದಣಿಗೊಂಡಿರುವ ತಂಡಗಳ ನಡುವೆ ದಶಕಗಳ ಬಳಿಕ‌‌ ನೋಕೌಟ್ ಮಾದರಿಯಲ್ಲಿ, ಕೊಡಗಿನಲ್ಲಿ ಕಾಲ್ಚೆಂಡು ಪಂದ್ಯಾವಳಿ ಆಯೋಜಿಸುವುದರ ಮ‌ೂಲಕ ಭಗವತಿ ಯೂತ್ ಕ್ಲಬ್ ಹಾಲುಗುಂದ ಯುವಕ ಸಂಘ, ಹಾಲುಗುಂದ ಗ್ರಾಮಸ್ಥರು ಹಾಗೂ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಲ್ಚೆಂಡು ಪಂದ್ಯಾವಳಿಗಳಲ್ಲಿ ಬಹುತೇಕ ಬ್ಲ್ಯಾಕ್ ಟೂರ್ನಮೆಂಟ್ ಗಳು.
ಆದರೆ ಭಗವತಿ ಯುವಕ ಸಂಘ ಹಾಲುಗುಂದ ಕೊಡಗು ‌ಜಿಲ್ಲಾ ಫುಟ್ಬಾಲ್ ‌ಅಸೋಸಿಯೇಷನ್‌ನಲ್ಲಿ ನೋಂದಣಿಗೊಂಡ ತಂಡಗಳ ‌ನಡುವೆ ಆಯೋಜಿಸಿದ್ದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಜಿಲ್ಲೆಯ ಯುವ ಪ್ರತಿಭೆಗಳಿಗೆ ತಮ್ಮ ಪ್ರದರ್ಶನವನ್ನು ‌ನೀಡಲು ಅವಕಾಶ ಒದಗಿದೆ.
ಹಾಗೂ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ನೋಂದಣಿಗೊಂಡ ತಂಡಗಳ ನಡುವೆ ದಶಕಗಳ ಬಳಿಕ ನೋಕೌಟ್ ಪಂದ್ಯಾವಳಿಯನ್ನು ಆಯೋಜಿಸುವುದರ ಮೂಲಕ ಭಗವತಿ ಯುವಕ ಸಂಘ ಜಿಲ್ಲೆಯ ಫುಟ್ಬಾಲ್ ಪ್ರೇಮಿಗಳ ಮನ ಗೆದ್ದಿದ್ದಾರೆ.

ವರದಿ :  ಕೆ.ಎಂ‌ ಇಸ್ಮಾಯಿಲ್, ಕಂಡಕರೆ 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ನಾಪೋಕ್ಲು: ಬಲಮುರಿ ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ಸಂಭ್ರಮದ ಪುಣ್ಯ ತೀರ್ಥಸ್ನಾನ ಜಾತ್ರಾ ಮಹೋತ್ಸವ

ಅಕ್ಟೋಬರ್ 19, 2026

ನಾಪೋಕ್ಲು ಸುತ್ತಮುತ್ತ ಬಿರುಸಿನ ಮಳೆ: ರಸ್ತೆಗಳು ಜಲಾವೃತ, ವಾಹನ ಸಂಚಾರಕ್ಕೆ ಅಡಚಣೆ

ಅಕ್ಟೋಬರ್ 19, 2026

ಮಡಿಕೇರಿ ದಸರಾ : ಮದ್ಯ ಮಾರಾಟ ನಿಷೇಧ

ಅಕ್ಟೋಬರ್ 19, 2026

ನಾಪೋಕ್ಲು ಸುತ್ತಮುತ್ತ ಬಿರುಸಿನ ಮಳೆ: ರಸ್ತೆಗಳು ಜಲಾವೃತ, ವಾಹನ ಸಂಚಾರಕ್ಕೆ ಅಡಚಣೆ

ಅಕ್ಟೋಬರ್ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಾಪೋಕ್ಲು, NEWS DESK ಅ.19: ನಾಪೋಕ್ಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು,…

ಮಡಿಕೇರಿ ದಸರಾ : ಮದ್ಯ ಮಾರಾಟ ನಿಷೇಧ

ಅಕ್ಟೋಬರ್ 19, 2026

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ: ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ

ಅಕ್ಟೋಬರ್ 19, 2026

ಚೆಟ್ಟಳ್ಳಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ

ಅಕ್ಟೋಬರ್ 19, 2026

ಅಕ್ಟೋಬರ್ 23 ರಂದು ಪಾಲಿಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಅಕ್ಟೋಬರ್ 19, 2026

ವಿರಾಜಪೇಟೆಯಿಂದ ತಲಕಾವೇರಿವರೆಗೆ 58 ಕಿ.ಮೀ. ಪಾದಯಾತ್ರೆ; 6ನೇ ವರ್ಷದ ಯಾತ್ರೆಯಲ್ಲಿ 15 ಮಂದಿ ಭಾಗಿ – 58 ಕಿ.ಮೀ. ಭಕ್ತಿಯ ನಡಿಗೆ

ಅಕ್ಟೋಬರ್ 19, 2026

ರಗ್ಬಿ ಇಂಡಿಯಾ ಮಂಡಳಿಗೆ ಕೊಡಗಿನ ತಿಮ್ಮಯ್ಯ ಮಾದಂಡ ಆಯ್ಕೆ; SOM ಚುನಾವಣೆಯಲ್ಲಿ ಮಹತ್ವದ ಗೆಲುವು; ಭಾರತೀಯ ರಗ್ಬಿ ಕ್ರೀಡೆಯ ಅಭಿವೃದ್ಧಿಗೆ ಹೊಸ ಜವಾಬ್ದಾರಿ

ಅಕ್ಟೋಬರ್ 19, 2026

ಶ್ರೀ ಕಾವೇರಿ ಭಕ್ತ ಮಂಡಳಿಯಿಂದ 72ನೇ ವರ್ಷದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 19, 2026

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹಾನಿಗೊಳಗಾದ ಮನೆಗೆ ಶಾಸಕ ಪೊನ್ನಣ್ಣ ಭೇಟಿ; ಸಂತ್ರಸ್ತ ಕುಟುಂಬಕ್ಕೆ ಅಗತ್ಯ ಸಾಮಗ್ರಿಗಳ ಕಿಟ್ ವಿತರಣೆ; ಸೂಕ್ತ ಪರಿಹಾರದ ಭರವಸೆ

ಅಕ್ಟೋಬರ್ 19, 2026

ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ: ಜಾನಪದ ಕಲಾಪ್ರಕಾರಗಳ ಪ್ರದರ್ಶನಕ್ಕೆ ಮನಸೋತ ಜನತೆ; ಜಾನಪದ ಸಂಸ್ಕೃತಿಯ ಉಳಿವಿಗೆ ಹೆಚ್ಚಿನ ಕಾಳಜಿ ಅಗತ್ಯ: ಶಾಸಕ ಎ.ಎಸ್.ಪೊನ್ನಣ್ಣ ಕರೆ; ಕಲಾವಿದರು ಹಾಗೂ ಜಾನಪದ ವಸ್ತು ಸಂಗ್ರಹಕಾರರಿಗೆ ಸನ್ಮಾನ

ಅಕ್ಟೋಬರ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.