ಮಡಿಕೇರಿ ಜ.1 : ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ಪುನರ್ ಪ್ರತಿಷ್ಠಾ 12ನೇ ವಾರ್ಷಿಕೋತ್ಸವವು ಜ.15 ರಂದು ನಡೆಯಲಿದೆ.
ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಪೂರ್ವಾಹ್ನ 7 ಗಂಟೆಗೆ ಮಹಾ ಗಣಪತಿ ಹೋಮ, 8 ಗಂಟೆಯಿಂದ ಶ್ರೀ ಏಕಾದಶ ರುದ್ರಾಭಿಷೇಕ ಆರಂಭಗೊಳ್ಳಲಿದೆ.
ಬೆಳಿಗ್ಗೆ 9 ಗಂಟೆಗೆಯಿಂದ ಶ್ರೀ ದೇವಿಗೆ ನವಕಲಶಾಭಿಷೇಕ ಪೂಜೆ, 11 ಗಂಟೆಗೆ ನವಗ್ರಹಗಳಿಗೆ ವಿಶೇಷ ಕಲಶಾಭಿಷೇಕ ಪೂಜೆ, 11.30 ಗಂಟೆಗೆ ನಾಗದೇವರಿಗೆ ವಿಶೇಷ ಪೂಜೆ ಜರುಗಲಿದೆ.
ಮಧ್ಯಾಹ್ನ 12 ಗಂಟೆಗೆ ಮಹಾ ಪೂಜೆ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದ್ದು, ಅಪರಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನೆರವೇರಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ ಟ್ರಸ್ಟ್‌ನ ಪ್ರಮುಖರು ಕೋರಿದ್ದಾರೆ.












