ನಾಪೋಕ್ಲು ಜ.1 : ಸತತ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಎಸ್.ಎ.ಪಿ ಲ್ಯಾಬ್ ಇಂಡಿಯಾದ ಪ್ರಾಡಕ್ಟ್ ಮಾಲೀಕ ಕೇಟೋಳಿರ ಕರುಣ್ ಅಪ್ಪಯ್ಯ ಹೇಳಿದರು.
ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವತಿಯಿಂದ ನಡೆದ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದ ಪ್ರತಿಯೊಂದು ಚಟುವಟಿಕೆಯಲ್ಲೂ ನಯ, ವಿನಯತೆಯನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು ನಾವು ಗಳಿಸಿದ ಜ್ಞಾನ ಇತರರ ಜೀವನದ ಮೇಲೆ ಪ್ರಭಾವ ಬೀರುವಂತಾಗಬೇಕು ಎಂದರು.ಧನಾತ್ಮಕವಾಗಿ ಯೋಚಿಸುವುದು ಅಗತ್ಯ ಇದರಿಂದ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಶ್ರೇಯಾಭಿವೃದ್ಧಿಗೆ ಶ್ರಮಿಸಿದವರನ್ನು ನೆನೆಸಿಕೊಂಡು ಸಂಸ್ಥೆ ನಡೆದುಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ದತ್ತಿನಿದಿ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿ ಶುಭ ಹಾರೈಸಿದರು .
ನಿರ್ದೇಶಕರಾದ ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ, ಬೊಪ್ಪಂಡ ಕುಶಾಲಪ್ಪ , ಮಕ್ಕಿ ಸುಬ್ರಮಣ್ಯ, ಬಿದ್ದಾಟ೦ಡ ಪಾಪ ಮುದ್ದಯ್ಯ , ಕೊಂಬಂಡ ಗಣೇಶ್, ನೆರವಂಡ ಸುನಿಲ್ ದೇವಯ್ಯ, ಬಿದ್ದಾತಂಡ ಮುತ್ತಣ್ಣ, ನಾಯಕಂಡ ದೀಪು ಚಂಗಪ್ಪ, ಅಪ್ಪಚೆಟ್ಟೋಳಂಡ ನವೀನ್ , ಚೌರಿರ ನೀರನ್ ಮಂದಣ್ಣ, ಶಾಲೆಯ ಪ್ರಾಂಶುಪಾಲರಾದ ಕಲ್ಯಾಟಂಡ ಶಾರದಾ ಅಪ್ಪಣ್ಣ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕಿ ಮುಂಡಂಡ ಕವಿತಾ ಸ್ವಾಗತಿಸಿದರು, ಕಂಗಂಡ ಸ್ಮಿತಾ ಅತಿಥಿಗಳ ಪಚಯ ಮಾಡಿದರು. ಪ್ರಾಂಶುಪಾಲರಾದ ಶಾರದ ಶಾಲಾ ವರದಿ ವಾಚಿಸಿದರು. ವಿದ್ಯಾರ್ಥಿ ನಾಯಕಿ ಮಾಚೇಟಿರ ಹರ್ಷಿತ ಕುಶಾಲಪ್ಪ ವಿದ್ಯಾರ್ಥಿ ಸಂಘದ ವರದಿ ಮಂಡಿಸಿದರು.
ಕ್ರೀಡಾ ವರದಿಯನ್ನು ಕ್ರೀಡಾ ಶಿಕ್ಷಕಿ ಕನ್ನoಡ ಸರಿತಾ ವಾಚಿಸಿದರು. ಪಾಡಿಯಮ್ಮಂಡ ಚಂದ್ರಕಲಾ ಮತ್ತು ಬೊಳ್ಳಚೆಟ್ಟೀರ ಶೋಭ ನಿರೂಪಿಸಿದರು. ಉದಿಯಂಡ ಲೀಲಾವತಿ ವಂದಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ವರದಿ : ದುಗ್ಗಳ ಸದಾನಂದ








