ವಿರಾಜಪೇಟೆ ಜ.1 : ಲಕ್ಸೋಟಿಕ್ ಫೌಂಡೇಶನ್ ವತಿಯಿಂದ ಒನ್ ಸೈಟ್ ಎಂಬ ಕಾರ್ಯಕ್ರಮದಡಿ ವಿರಾಜಪೇಟೆಯ ಜೆ.ಪಿ.ಎನ್.ಎಂ. ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ನಡೆಯಿತು.
ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಣ್ಣಿನ ತಪಾಸಣೆಯನ್ನು ನಡೆಸಿ, ಕಾಲ ಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವಂತೆ ಹೇಳಿದರು.
ಕಣ್ಣಿನ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಕನ್ನಡಕವನ್ನು ವಿತರಿಸಿದರು.
ಈ ಸಂದರ್ಭ ಲಕ್ಸೋಟಿಕ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷರಾದ ಕಣ್ಣು ದೇವರಾಜ್, ಅಗ್ನಿ ಮೋಹನ್, ದಿವ್ಯ ಮುತ್ತಣ್ಣ, ಶ್ವೇತಾ ಅಯ್ಯಪ್ಪ, ಡಾ.ಸಿದ್ದರಾಜು, ಮುಖ್ಯ ಶಿಕ್ಷಕರಾದ ಲಾಲ್ ಕುಮಾರ್, ಬಿಆರ್‍ಸಿ ಸಿಬ್ಬಂದಿಗಳಾದ ಅಜಿತ, ವಿಠಲ್ ಕೇಶವಮೂರ್ತಿ ಹಾಜರಿದ್ದರು.
ವಿವಿಧ ಶಾಲೆಗಳಿಂದ ಆಗಮಿಸಿದ್ದ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.









