ಕಡಂಗ ಜ.1 : ಸಮಸ್ತ ಕೇರಳ ಜಮ್‍ಇಯ್ಯತುಲ್ ಉಲಮಾದ 100ನೇ ವಾರ್ಷಿಕ ಸಮ್ಮೇಳನವು 2026ರಲ್ಲಿ ನಡೆಯಲಿದೆ ಎಂದು ಸಮಸ್ತ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಘೋಷಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ನಡೆದ ಮಹಾ ಸಮ್ಮೇಳನದಲ್ಲಿ ಸಮಸ್ತ ಸಂಘಟನೆಯ ಶತಮಾನೋತ್ಸವ ಘೋಷಣೆ ದಿನವನ್ನು ಘೋಷಣೆ ಮಾಡಿದರು.
ಕಾರ್ಯಕ್ರಮದ ಧ್ವಜಾರೋಹಣದಲ್ಲಿ ರಾಜ್ಯ ವಿಧಾನ ಸಭಾಧ್ಯಕ್ಷ ರಾದ ಯು.ಟಿ.ಖಾದರ್ ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ಸಮಸ್ತ ಸಂಘಟನೆಯ 40 ಮುಶಾವರ ಸದಸ್ಯರು ಭಾಗಿಯಾಗಿದ್ದು ವಿಶೇಷವಾಗಿತ್ತು.
ಈ ಕಾರ್ಯಕ್ರಮದ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ರಂಗ ಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ವರದಿ : ನೌಫಲ್ ಕಡಂಗ








