ಮಡಿಕೇರಿ ಜ.1 : ಕೊಡಗು ಜಿಲ್ಲಾ ವಿಷ್ಣುಸೇನಾ ಸಮಿತಿ ವತಿಯಿಂದ ನಗರದ ತ್ಯಾಗರಾಜ್ ಕಾಲೋನಿಯ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ದಿ.ಡಾ.ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.
ನಟ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಸಮಿತಿ ಪ್ರಮುಖರು ಹಾಗೂ ಪದಾಧಿಕಾರಿಗಳು ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ಸಂದರ್ಭ ಕೋಟಿಗೊಬ್ಬ ಹೊಸ ವರ್ಷದ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ರಫೀಕ್ ( ದಾದಾ ), ವಿಷ್ಣುಸೇನಾ ಸಮಿತಿಯ ವತಿಯಿಂದ ಹಲವಾರು ಯಶಸ್ವಿ ಕಾರ್ಯಕ್ರಮಗಳ ಳನ್ನು ನಡೆಸಿಕೊಂಡು ಬರಲಾಗಿದ್ದು, ಮುಂದಿನ ದಿನಗಳಲ್ಲಿಯೂ ವಿಷ್ಣುವರ್ಧನ್ ಅವರ ಹೆಸರಿಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭ ಕೊಡಗು ಹಿತರಕ್ಷಣ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಗೌಡ, ಲಿಲ್ಲಿ ರವಿ ಗೌಡ, ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಮುನಿರ್ ಮಾಚರ್, ಆಶ್ರಮದ ವ್ಯವಸ್ಥಾಪಕ ಸತೀಶ್, ರೀನಾ ಸತೀಶ್, ಕೂರ್ಗ್ ಫೈವ್ ಸ್ಟಾರ್ ಸಿಂಗರ್ ತಂಡದ ನಾಯಕರಾದ ಶಿವಣ್ಣ, ನೋಬಿನ್, ಹಬೀಬ್, ಭಾಷಾ, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿಷ್ಣುಸೇನಾ ಸಮಿತಿಯ ಖಜಾಂಚಿ ಪಿ.ಐ.ಅನ್ಸರ್, ಸಹ ಕಾರ್ಯದರ್ಶಿ ಪ್ರವೀಣ್ ಲೋಬೋ ( ಡಿಂಗ ), ಸದಸ್ಯರಾದ ಟೆಂಪೋ ಉಮೇಶ್, ರೆಡ್ ಫೋರ್ಟ್ ಷರೀಫ್, ಜಲೀಲ್, ಮೂರ್ತಿ, ಜಯಪ್ರಕಾಶ್ ಸೇರಿದಂತೆ ಹಾಗೂ ಆಶ್ರಮದ ಹಿರಿಯ ನಾಗರಿಕರು, ಮತ್ತಿತರರು ಹಾಜರಿದ್ದರು. ವಿಷ್ಣು ಸೇನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ, ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಮುನೀರ್ ಮಾಚರ್ ಸಮಿತಿಯ ಜಿಲ್ಲಾಧ್ಯಕ್ಷ ರಫೀಕ್ ( ದಾದಾ ) ಅವರನ್ನು ಸನ್ಮಾನಿಸಿ ಗೌರವಿಸಿದರು.








