ಮಡಿಕೇರಿ ಜ.1 : ನಗರದ ಬ್ರಹ್ಮಕುಮಾರೀಸ್ ಲೈಟ್ ಹೌಸ್ ನಲ್ಲಿ ಹೊಸ ವರ್ಷದ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಹಿರಿಯ ಸಹೋದರರಾದ ಬ್ರಹ್ಮ ಕುಮಾರ್ ಪ್ರಾಣೇಶ್ ಅವರು ಹೊಸ ವರ್ಷವೂ ಪ್ರತಿಯೊಬ್ಬರಿಗೂ ನವ ಚೈತನ್ಯವನ್ನು ತುಂಬಿ ಬರುವಂತಹ ಎಲ್ಲಾ ವಿಘ್ನಗಳನ್ನು ಎದುರಿಸಿ, ಜೀವನದಲ್ಲಿ ಮುಂದುವರಿಯಲು ನಮಗೆ ಪರಮಾತ್ಮನ ಶಕ್ತಿ ಬಹಳ ಅವಶ್ಯಕತೆ ಇದೆ. ಹಾಗಾಗಿ ದಿನಕ್ಕೆ ಒಂದು ಗಂಟೆಯಾದರೂ ನಾವು ಆಧ್ಯಾತ್ಮ ಚಿಂತನೆಗೆ ಮತ್ತು ಪರಮಾತ್ಮನ ಧ್ಯಾನಕ್ಕೆ ಮೀಸಲಿಡುವುದು ಅತಿ ಉತ್ತಮ ವೆಂದು ಕಿವಿ ಮಾತು ಹೇಳಿದರು.
ಹಿರಿಯ ಸಹೋದರಿ ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿಜಿ ಅವರು ಎಲ್ಲರಿಗೂ ಆಶೀರ್ವಚನ ನೀಡಿ ಶುಭ ಹಾರೈಸಿದರು.
ಡಾ.ಸೆಂತಿಲ್ ಕುಮಾರ್, ಡಾ.ಧಾರಿಣಿ ಹೊಸ ವರ್ಷದ ಶುಭಾಶಯ ತಿಳಿಸಿದರು.
ನೆರೆದಿದ್ದ ಎಲ್ಲ ಸಹೋದರ, ಸಹೋದರಿಯರು ಹೊಸ ವರ್ಷಕ್ಕಾಗಿ ಈ ವರ್ಷವನ್ನು ಇಯರ್ ಆಫ್ ಬ್ಲೆಸ್ಸಿಂಗ್ಸ್ ಎಂದು ಬ್ರಹ್ಮಕುಮಾರಿ ಸಂಸ್ಥೆಯ ವತಿಯಿಂದ ಆಚರಿಸಲಾಗುತ್ತಿದೆ ಹಾಗಾಗಿ ಸರ್ವರು ಆಶೀರ್ವಾದ ಪಡೆಯುವುದು ಹಾಗೂ ಆಶೀರ್ವಾದ ಕೊಡುವುದು ತಮ್ಮ ಧರ್ಮವಾಗಿ ಮಾಡಿ ಮಾಡಿಕೊಂಡು ಸಮತೋಲನ ಜೀವನದಿಂದ ಸಫಲತೆಯನ್ನು ಪಡೆಯುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.
ಅನೇಕ ಬ್ರಹ್ಮಕುಮಾರ ಕುಮಾರಿಯರು ಮೌನ ದಲ್ಲಿದ್ದು ಹೆಚ್ಚಿನ ಲಾಭ ಪಡೆದರು.









