ಮಡಿಕೇರಿ ಜ.6 : ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಉಪಟಳ ಆರಂಭಗೊಂಡಿದ್ದು, ಹಸುವೊಂದು ಸಾವನ್ನಪ್ಪಿದೆ. ಪೊನ್ನಂಪೇಟೆ ತಾಲ್ಲೂಕಿನ ನಿಡುಗಂಬ ಗ್ರಾಮದಲ್ಲಿ ಹಾಡಹಗಲೇ ದಾಳಿ ಮಾಡಿದ ಹುಲಿಗೆ ಹಸು ಬಲಿಯಾಗಿದೆ.
ಸ್ಥಳೀಯ ನಿವಾಸಿ ಚೆನಿಯಪಂಡ ಬೋಪಣ್ಣಿ ಬೋಪಯ್ಯ ಎಂಬುವವರಿಗೆ ಸೇರಿದ ಹಸವಿದಾಗಿದೆ. ಗದ್ದೆಯಲ್ಲಿ ಹಸು ಮೇಯುತ್ತಿದ್ದಾಗ ಹುಲಿ ದಾಳಿ ಮಾಡಿದೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ತಕ್ಷಣ ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.











