ಮಡಿಕೇರಿ ಜ.9 : ಮಧ್ಯ ಪ್ರದೇಶದ ಭೂಪಾಲ್ ನಲ್ಲಿ ಡಿ.26 ರಿಂದ 31 ರ ವರೆಗೆ ನಡೆದ ಸಿ ಬಿ ಎಸ್ ಇ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ಬಾಲಕರ ತಂಡವು ತೃತೀಯ ಸ್ಥಾನವನ್ನು ಪಡೆದಿದೆ.
ಈ ತಂಡದ ತರಬೇತುದಾರರಾಗಿ ಹೆಚ್.ಡಿ.ದೀನ ಹಾಗೂ ತಂಡದ ವ್ಯವಸ್ಥಾಪಕರಾಗಿ ಕೆಚ್ಚೆಟ್ಟಿರ ಪಾರ್ವತಿ ಕಾರ್ಯ ನಿರ್ವಹಿಸಿದ್ದರು. ತಂಡದ ಆಟಗಾರರು, ತರಬೇತುದಾರರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.









