ಮಡಿಕೇರಿ ಜ.10 : ಕೇರಳದ ಪಯ್ಯವೂರ್ ನಲ್ಲಿ ವರ್ಷಂಪ್ರತಿ ನಡೆಯಲಿರುವ ಊಟ್ ಮಹೋತ್ಸವದ ಪ್ರಯುಕ್ತ ನಾಡ್ ಗೆ ಒಳಪಟ್ಟ ಗ್ರಾಮಸ್ಥರ ವಿಶೇಷ ಸಭೆಯು ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆಯಿತು. ಕುಟುಂಬದ ತಕ್ಕಮುಖ್ಯಸ್ಥರಾದ ಮುಂಡಿಯೊಳಂಡ ತಮ್ಮಯ್ಯ ಹಾಗೂ ಬೊವೈರಿಯಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಗ್ರಾಮಸ್ಥರಾದ ಐತಿಚಂಡ ಬಿಮ್ಮಯ್ಯ, ಅರುಣಾ, ರಾಜೇಶ್ ಅಚ್ಚಯ್ಯ, ಪಟ್ಟಚೆರುವಂಡ ಹರಿ ಮುತ್ತಪ್ಪ, ಜೀವನ್, ಕುಮ್ಮಂಡ ಕಾಯಪ್ಪ ಹಲವು ಕುಂದು ಕೊರೆತೆಗಳ ಬಗ್ಗೆ ಗಮನ ಸೆಳೆದರು.
ಈ ಸಂದರ್ಭ ದೇವಸಂ ಬೋರ್ಡ್ ನ ಬಿಜು ಮಾತನಾಡಿ ನಾವು ದೇವಸ್ಥಾನದ ಅಧಿಕಾರ ಸ್ವೀಕರಿಸಿ 4 ತಿಂಗಳುಗಳು ಮಾತ್ರವಾಗಿದ್ದು, ತಮ್ಮ ಅಭಿಪ್ರಾಯ ಸಂಗ್ರಹಿಸದೆ ಯಾವುದೇ ಕಾರ್ಯಕ್ರಮ ಕೈಗೊಳ್ಳುದಿಲ್ಲ ಎಂದರು. ಮುಂದಿನ ದಿನಗಳಲ್ಲಿ ಸರಕಾರದ ಅನುದಾನ ಪಡೆದು ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿ ಕೊಡಗಿನ ಸ್ಥಾನ(ಗುದ್ದ)ದಲ್ಲಿ ಕಟ್ಟಡ ನಿರ್ಮಿಸಿ ಕೊಡಗಿನಿಂದ ಬರುವ ಯಾತ್ರಾಥಿಗಳಿಗೆ ತಂಗಲು ಅವಕಾಶ ಕಲ್ಪಿಸಲಾಗುವುದೆಂದು ತಿಳಿಸಿದರು.
ಟ್ರಸ್ಟಿ ಮುಂಡಿಯೋಳಂಡ ಅಜಿತ್ ಸುಬ್ಬಯ್ಯ ಮಾತನಾಡಿ ಈ ವರ್ಷದ ಊಟ್ ಹಬ್ಬಕ್ಕೆ ಬೇಕಾದ ಎಲ್ಲಾ ಸೌಕರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು, ವಿರಾಜಪೇಟೆ ಕ್ಷೇತ್ರದ ಶಾಸಕರನ್ನು ಆಹ್ವಾನಿಸಲಾಗುವುದು ಎಂದರು. ದೇವಸಂ ಬೋರ್ಡ್ ನ ಪಿ.ಪ್ರವೀಣ್ ಕುಮಾರ್, ಶರತ್ ಶಶಿ, ಟ್ರಸ್ಟಿಗಳಾದ ಕೆ.ವಿ.ಉತ್ತಮನ್, ಮುಂಡಿಯೋಳಂಡ ಅಜಿತ್ ಸುಬ್ಬಯ್ಯ, ಬಿ.ಕೆ.ಜೀವನ್, ನಾಡ್ ಗೆ ಒಳಪಟ್ಟ ಗ್ರಾಮಸ್ಥರು ಹಾಜರಿದ್ದರು. ಕುಮ್ಮಂಡ ಕಾರ್ಯಪ್ಪ ಪ್ರಾರ್ಥಿಸಿ, ಅಜಿತ್ ಸುಬ್ಬಯ್ಯ ಸ್ವಾಗತಿಸಿ, ವಂದಿಸಿದರು. ವರದಿ : ಅಶ್ರಫ್