ಮಡಿಕೇರಿ ಜ.14 : ಕೊಡಗು ಜಿಲ್ಲೆಯ ಲೆಫ್ಟಿನೆಂಟ್ ಐಶ್ವರ್ಯ ಎ.ಜಿ(24) ಹಾಗೂ ಮಧ್ಯಪ್ರದೇಶದ ಸೆಹೋರ್ ನ ಲೆಫ್ಟಿನೆಂಟ್ ಉತ್ಕರ್ಷ್ ಬಿ.ಶರ್ಮಾ(27) ಅವರು ಲಖನೌ ನಗರದ 11 ಜಿಆರ್‌ಆರ್‌ಸಿ ಠಾಕೂರ್ ಷಿಯೋದಾತ್ ಸಿಂಗ್ ಪರೇಡ್ ಮೈದಾನದಲ್ಲಿ ಜನವರಿ 15 ರಂದು ನಡೆಯುವ 76ನೇ ಸೇನಾ ದಿನದ ಪರೇಡ್ ನಲ್ಲಿ ಸೇನಾ ತುಕಡಿಯನ್ನು ಮುನ್ನಡೆಸಲಿದ್ದಾರೆ.
ಐಶ್ವರ್ಯ ಮಡಿಕೇರಿಯ ಉದ್ಯಮಿ ಗಣೇಶ್ ಹಾಗೂ ಮೋಂತಿ ಗಣೇಶ್ ಅವರ ಪುತ್ರಿ.
ಬಿಬಿಎ ಪದವೀಧರರಾಗಿರುವ ಐಶ್ವರ್ಯಾ ಅವರು ಎನ್‌ಸಿಸಿಯಲ್ಲಿದ್ದಾಗ ಸಿ ಪ್ರಮಾಣ ಪತ್ರವನ್ನು ಹೊಂದಿದ್ದಾರೆ. 2017ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಂದು ಎನ್‌ಸಿಸಿ ತುಕಡಿಯನ್ನು ಮುನ್ನಡೆಸಿದ್ದರು. ಎನ್‌ಸಿಸಿ ಇವರಿಗೆ ಸೇನಾ ಅಧಿಕಾರಿಯಾಗಲು ಪ್ರೇರೇಪಿಸಿತು.












