ವಿರಾಜಪೇಟೆ ಜ.24 NEWS DESK : ಶ್ರೀ ರಾಮನ ಭಕ್ತನಾಗಿರುವ ಶ್ರೀ ಆಂಜನೇಯ ನ ಪಾದ ಸ್ಪರ್ಶದ ಪುಣ್ಯ ಸ್ಥಾನವಾಗಿರುವ ಮಾಕುಟ್ಟ ಅರಣ್ಯ ಪ್ರದೇಶದ ಹನುಮಾನ್ ಪಾರ ದೇವಾಲಯದಲ್ಲಿ ಶ್ರೀರಾಮೋತ್ಸವ ಅಂಗವಾಗಿ ಸಂಕಲ್ಪ ಪೂಜೆ ನೆರವೇರಿತು.
ರಾಮೋತ್ಸವ ಅಂಗವಾಗಿ ಗ್ರಾಮಸ್ಥರು, ರಾಮ ಭಕ್ತರು ಸ್ಥಳಕ್ಕೆ ಆಗಮಿಸಿ ಸಂಕಲ್ಪ ಪೂಜೆ ಸಲ್ಲಿಸಿದರು. ಶ್ರೀ ರಾಮನ ಪ್ರಾಣ ಪ್ರತಿಷ್ಟೆ, ದೇಗುಲ ಲೋಕಾರ್ಪಣೆ ವೇಳೆ ಸರ್ವರಿಗೂ ಒಳಿತಾಗಲಿ ಎಂದು ಸಂಕಲ್ಪ ಮಾಡಲಾಯಿತು.
ಈ ಸಂಧರ್ಭದಲ್ಲಿ ಪ್ರಮುಖರಾದ ಚುಪ್ಪ ನಾಗರಾಜ್, ಟಿ.ಅರ್.ಗಣೇಶ್, ದೇಗುಲ ಅರ್ಚಕ ಸುಕುಮಾರ್, ಅಯ್ಯಪ್ಪ ಭಜನಾ ಮಂದಿರದ ಅದ್ಯಕ್ಷ ಮಹೇಶ್,ಶಿವಪ್ಪ, ಉಮೇಶ್, ತೀರ್ಥ ಕುಮಾರ್,ಹರೀಶ್ ಕುಟ್ಟಿ,ಬಿ,ಎಂ. ಗಿರೀಶ್, ದೇವಾ ದಾಸ್ ಮತ್ತು ಗ್ರಾಮಸ್ಥರು ಹಾಜರಿದ್ದರು.
ಇತಿಹಾಸ :: ಮೆದುಡಿ ಪಾರ ಅಥವಾ ಹನುಮಾನ್ ಪಾರ “ಬೃಹತ್ ಕಲ್ಲು” ಎಂಬ ಅರ್ಥ ಕಲ್ಪಿಸಲಾಗುತ್ತದೆ. ಬೆಟ್ಟದಂತಿರುವ ಬೃಹತ್ ಕಲ್ಲಿನ ಮೇಲೆ ಶ್ರೀ
ಆಂಜನೇಯ ಸ್ವಾಮಿ ಪಾದ ಹಾಗೂ ಬಾಲ ಎಳೆದುಕೊಂಡು ಹೋಗಿರುವ ಕುರುಹುಗಳು ಇಂದಿಗೂ ಕಾಣಸಿಗುತ್ತದೆ.ರಸ್ತೆಯ ಅಂಚಿನಿಂದ ಪ್ರಾರಂಭವಾಗಿ ಅರಣ್ಯ ಭಾಗದಲ್ಲಿ ಸುಮಾರು 80 ಮೀಟರ್ ವರೆಗೆ ಕಲ್ಲಿನ ಮೇಲೆ ಶ್ರೀ ಸ್ವಾಮಿಯ ಬಾಲದ ಕುರುಹುಗಳು ಪಸರಿಸಿದೆ.
ಸುಮಾರು 80 ವರ್ಷಗಳ ಹಿಂದೆ ಗ್ರಾಮಸ್ಥರು, ಮತ್ತು ರಾಮ ಭಕ್ತ ರು ಸೇರಿ ಪುಟ್ಟ ಗುಡಿ ನಿರ್ಮಾಣ ಮಾಡಿ ಆಂಜನೇಯ ಸ್ವಾಮಿ ಯ ಆರಾಧನೆ ಮಾಡಿಕೊಂಡು ಬರುತಿದ್ದರು ಎನ್ನಲಾಗಿದೆ. ಗುಡಿ ಶಿಥಿಲಗೊಂಡು ಬೀಳುವ ಹಂತದಲ್ಲಿ ಇರುವಾಗಲೇ ಹೆದ್ದಾರಿ ಗುತ್ತಿಗೆದಾರರಾದ ಟಿ.ಕೆ.ರಾಜನ್ ಎಂಬುವರು ಸುಸಜ್ಜಿತವಾದ ಗುಡಿ ನಿರ್ಮಾಣ ಮಾಡಿ ಇದೀಗಾ ನಿತ್ಯ ಪೂಜೆ ಮಾಡಲಾಗುತ್ತಿದೆ.
ವರದಿ : ಕಿಶೋರ್ ಕುಮಾರ್ ಶೆಟ್ಟಿ