ಮಡಿಕೇರಿ ಜ.27 NEWS DESK : ನಮ್ಮ ಕೊಡಗು ಜಿಲ್ಲೆ ಕ್ರೀಡೆಗಳ ತವರೂರು. ಇಲ್ಲಿನ ಕ್ರೀಡಾ ಕಲಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ. ಇಂಥ ಸಾಧಕರ ಸಾಲಿನಲ್ಲಿರುವ ನಮ್ಮ ಹೆಮ್ಮೆಯ ಟೆನಿಸ್ ಪಟು ರೋಹನ್ ಬೋಪಣ್ಣ ಹಾಗೂ ಕೊಡಗು ಮೂಲದ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿಣ್ಣಪ್ಪ ಅವರಿಗೆ ಪದ್ಮಶ್ರೀ ಪುರಸ್ಕಾರ ಭಾಜನವಾಗಿದೆ. ಇದು ಅವರ ಸಾಧನೆಗೆ ಸಿಕ್ಕ ಸಮ್ಮಾನವಾಗಿದೆ. 43ನೇ ವಯಸ್ಸಿನಲ್ಲಿ ಡಬಲ್ಸ್ ವಿಭಾಗದಲ್ಲಿ ನಂಬರ್ ಸ್ಥಾನಕೇರಿದ ರೋಹನ್ ಬೋಪಣ್ಣ ಅವರಿಗೆ ಇದು ಡಬಲ್ ಸಂಭ್ರಮ. ನಮ್ಮ ಕೊಡಗಿನ ಕೀರ್ತಿ ಪತಾಕೆಯನ್ನು ಜಗದಗಲ ಪಸರಿಸಿದ ಈ ಕ್ರೀಡಾ ಕಲಿಗಳಿಗೆ ಅಭಿನಂದನೆಗಳು.
ಜಿಲ್ಲೆಯಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಉತ್ತೇಜಸಲು ನಮ್ಮ ಸರ್ಕಾರ ಸದಾ ಸಿದ್ದವಿದೆ.
N. S ಬೋಸರಾಜು,
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು.
ಕರ್ನಾಟಕ ಸರ್ಕಾರ.