ಮಡಿಕೇರಿ ಜ.29 NEWS DESK : ದಕ್ಷಿಣ ಕೊಡಗಿನ ಟೇಬಲ್ ಟೆನ್ನಿಸ್ ಆಟಗಾರರಿಗಾಗಿ ವಿರಾಜಪೇಟೆ ಅಕಾಡೆಮಿ ಆಫ್ ಟೇಬಲ್ ಟೆನ್ನಿಸ್ ಸಂಸ್ಥೆ ವತಿಯಿಂದ ನಡೆದ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಡೇರಿಕ್ ಡಿಸೋಜಾ ಪ್ರಥಮ ಮತ್ತು ಪೆÇನ್ನಂಪೇಟೆಯ ಈಶ್ವರ್ ದ್ವಿತೀಯ ಸ್ಥಾನ ಗಳಿಸಿದರು.
ವಿರಾಜಪೇಟೆಯ ನಿಖಿಲ್ ರಾಮಮೂರ್ತಿ ಅವರು ಆಯೋಜಿಸಿದ್ದ ಪಂದ್ಯಾವಳಿಯಲ್ಲಿ 19 ಆಟಗಾರರು ಪಾಲ್ಗೊಂಡಿದ್ದರು. ಹಿರಿಯ ವಕೀಲ ಎಸ್.ಆರ್.ಜಗದೀಶ್ ಪಂದ್ಯ ಉದ್ಘಾಟಿಸಿದರು.
ನಿಖಿಲ್ ರಾಮಮೂರ್ತಿ ಮಾತನಾಡಿ ದಕ್ಷಿಣ ಕೊಡಗಿನಲ್ಲಿ ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ಪ್ರೋತ್ಸಾಹ ನೀಡಲು ಮತ್ತು ಆಟಗಾರರಿಗೆ ಸೂಕ್ತ ಅವಕಾಶ ಕಲ್ಪಿಸಲು ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಅನೇಕ ಯುವ ಆಟಗಾರರು ಮುಂದಿನ ದಿನಗಳಲ್ಲಿ ಇದರಿಂದ ಸ್ಪೂರ್ತಿ ಪಡೆಯುವಂತಾಗಲಿ ಎಂದರು.
ವಿಜೇತರಿಗೆ ವಿರಾಜಪೇಟೆಯ ವಕೀಲರಾದ ಸಿಂಧೂರ ಎನ್.ಸ್ವಾಮಿ ಬಹುಮಾನ ವಿತರಿಸಿದರು.