ಮಡಿಕೇರಿ ಜ.30 NEWS DESK : ಬೈತೂರು ಉತ್ಸವ ಹಿನ್ನೆಲೆ ದಕ್ಷಿಣ ಕೊಡಗಿನ ವಿರಾಜಪೇಟೆಯಿಂದ ಕೇರಳದ ಬೈತೂರಪ್ಪ ದೇವಾಲಯಕ್ಕೆ ಇಬ್ಬರು ಕೊಡವ ಯುವಕರಾದ ಚೆಟ್ಟೋಳಿರ ಶರತ್ ಸೋಮಣ್ಣ, ಮುರುವಂಡ ಸವನ್ ಸೋಮಣ್ಣ, ಪಾದಯಾತ್ರೆ ನಡೆಸಿದರು.
ವಿರಾಜಪೇಟೆಯಿಂದ ಮಂಗಳವಾರ ಬೆಳಗ್ಗೆಪಾದಯಾತ್ರೆ ಪ್ರಾರಂಭಿಸಿದ ಇವರು ವೀರಾಜಪೇಟೆ, ಪೆರುಂಬಾಡಿ, ಮಾಕುಟ್ಟ, ಕೂಟುಪೊಳೆ,ಹುಲಿಕಲ್ ಮೂಲಕ ಪಾದಯಾತ್ರೆ ನಡೆಸಿ ಮಧ್ಯಾಹ್ನ ಹೊತ್ತಿಗೆ ಸುಮಾರು 40 ಕಿ.ಮಿ. ಕ್ರಮಿಸಿ ದೇವಾಲಯಕ್ಕೆ ತಲುಪಿದರು. ನಂತರ ಮೂರು ದಿನ ಅಲ್ಲಿಯೇ ತಂಗಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿ, ವೀರಾಜಪೇಟೆಗೆ ಹಿಂತಿರುಗಿದರು.