ಮಡಿಕೇರಿ ಡಿ.3 NEWS DESK : ವಕೀಲ ವೃತ್ತಿಯ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯುವಪೀಳಿಗೆಯ ವಕೀಲರಿಗೆ ಹಿರಿಯ ವಕೀಲರು ಪ್ರೋತ್ಸಾಹ ನೀಡುವ ಮಾಗ೯ದಶಿ೯ಗಳಾಗಬೇಕೆಂದು ಮುಖ್ಯ ಮಂತ್ರಿಗಳ ಕಾನೂನು ಸಹೆಗಾರ ಮತ್ತು ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದ್ದಾರೆ. ನಗರದ ಹೊರವಲಯದಲ್ಲಿನ ಕ್ಯಾಪಿಟಲ್ ವಿಲೇಜ್ ರೆಸಾಟ್೯ನಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಆಯೋಜಿತ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ವಕೀಲರ ಸೇವೆ ಸದಾ ಸ್ಮರಣೀಯವಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿಯೂ ವಕೀಲರು ಮುಂಚೂಣಿಯಲ್ಲಿದ್ದದ್ದು ಗಮನಾಹ೯, ಇಂಥ ಪವಿತ್ರ ವೃತ್ತಿಯಾದ ವಕೀಲ ವೃತ್ತಿಯ ಘನತೆಯನ್ನು ಸದಾ ಎತ್ತರದಲ್ಲಿರುವಂತೆ ಪ್ರತೀಯೋವ೯ ವಕೀಲರೂ ಗಮನಹರಿಸುವಂತೆ ಹೇಳಿದರು. ಗ್ರಾಮೀಣ ನ್ಯಾಯಾಲಯಗಳಿಂದ ಮೊದಲ್ಗೊಂಡು ಸವೋ೯ಚ್ಚ ನ್ಯಾಯಾಲಯದವರೆಗೂ ವಕೀಲರ ಪಾಂಡಿತ್ಯ ಸಮಾನವಾಗಿರುತ್ತದೆ. ಇದರಿಂದಾಗಿಯೇ ಇಂದಿಗೂ ವಕೀಲ ವೃತ್ತಿ ತನ್ನ ನಂಬಿಕೆಯನ್ನು ದೇಶದಲ್ಲಿ ಉಳಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟ ಪೊನ್ನಣ್ಣ, ವಕೀಲರು ಸದಾ ಹೊಸವಿಚಾರಗಳನ್ನು, ನವ ಕಾನೂನುಗಳನ್ನು ಅಧ್ಯಯನ ಮಾಡುತ್ತಲೇ ಇರಬೇಕು. ಈ ಮೂಲಕ ವೃತ್ತಿಯಲ್ಲಿ ಜ್ಞಾನ ಸಂಪಾದನೆಗೆ ಸಕ್ರಿಯರಾಗಿರಬೇಕೆಂದರು. ಜ್ಞಾನದ ತಿಳುವಳಿಕೆಯಿಂದ ಉನ್ನತ ಮಟ್ಟದ ವಕೀಲರಾಗಲು ಸಾಧ್ಯ ಎಂದ ಅವರು ವಕೀಲರ ಜತೆಗೆ ವಕೀಲ ವೃತ್ತಿಯ ಸಂರಕ್ಷಣೆ ಕೂಡ ಆಗಬೇಕೆಂಬ ಉದ್ದೇಶದಿಂದ ಕಳೆದ ವಷ೯ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯಿದೆಯನ್ನು ಮಂಡಿಸಲಾಯಿತು. ವಕೀಲರ ರಕ್ಷಣೆಯಾದಾಗ ಆ ಮೂಲಕ ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆ ಕೂಡ ಆಗುತ್ತದೆ ಎಂಬ ಉದ್ದೇಶ ಈ ಕಾಯಿದೆ ಜಾರಿಯ ಹಿನ್ನಲೆಯಲ್ಲಿದೆ ಎಂದೂ ಪೊನ್ನಣ್ಣ ಮಾಹಿತಿ ನೀಡಿದರು. ಕನಾ೯ಟಕ ಸಕಾ೯ರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್.ದೇವದಾಸ್ ಮಾತನಾಡಿ, 75 ವಷ೯ಗಳನ್ನು ಪೂರೈಸಿರುವ ದೇಶದ ಸಂವಿಧಾನ ಅಪಾಯದಲ್ಲಿದೆ ಎಂಬ ಕೂಗು ಕೇಳಿಬಂದಿರುವ ಈ ಕಾಲಘಟ್ಟದಲ್ಲಿ, ವಕೀಲರು ಸಂವಿಧಾನದ ಸಂರಕ್ಷರಾಗುವತ್ತ ಮುಂದಡಿ ಇರಿಸಬೇಕು, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ವಕೀಲ ಸಮೂಹ, ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವದ ರಕ್ಷಣೆ ನಿಟ್ಟಿನಲ್ಲಿ ಹಿಂದಡಿ ಇರಿಸುವಂತೆ ಆಗಬಾರದು ಎಂದು ಕರೆ ನೀಡಿದರು. ಕಠಿಣ ಶ್ರಮದಿಂದ ಯುವಪೀಳಿಗೆಯು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡು ಉನ್ನತ ಸ್ಥಾನ ಪಡೆಯಬೇಕು. ಆ ಮೂಲಕ ವೃತ್ತಿಯ ಗೌರವ ಕಾಪಾಡಿಕೊಳ್ಳುವಂತೆ ಕರೆ ನೀಡಿದ ದೇವದಾಸ್, ಕಿರಿಯ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದಾಗ ಅದನ್ನು ಆಲಿಸಿ ಕಿರಿಯರಿಗೆ ಪ್ರೋತ್ಸಾಹದ ನುಡಿಗಳನ್ನಾಡಿ ಮೆಚ್ಚುಗೆ ವ್ಯಕ್ತಪಡಿಿಸಬೇಕು, ಜತೆಗೇ ಮಾಗ೯ದಶ೯ನ ನೀಡುವ ಕೆಲಸ ಹಿರಿಯ ವಕೀಲರಿಂದ ಆಗಬೇಕೆಂದು ಹೇಳಿದರು. ವಕೀಲರು ಸದಾ ನ್ಯಾಯಕ್ಕಾಗಿ ಹೋರಾಟ ನಡೆಸಬೇಕೇ ವಿನಾ ತೀಪು೯ ನೀಡುವ ನ್ಯಾಯಾಧೀಶರ ವಿರುದ್ದ ಅಲ್ಲ ಎಂದು ಸೂಚ್ಯವಾಗಿ ದೇವದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿಯ ಮಹದೇವಪೇಟೆ ರಸ್ತೆ ಅಗಲೀಕರಣ, ಮುಖ್ಯರಸ್ತೆಯಲ್ಲಿ ಅಂಗಡಿಗಳ ತೆರವು ಪ್ರಕರಣ ಸೇರಿದಂತೆ ಇದೀಗ ತ್ಯಾಜ್ಯ ವಿಲೇವಾರಿ ಸಮಸ್ಯೆ ಸಂಬಂಧಿತ ತಾನು ಮಡಿಕೇರಿ ನಿವಾಸಿಗಳ ಪರವಾಗಿ ಹೈಕೋಟ್೯ನಲ್ಲಿ ವಾದಮಂಡಿಸುತ್ತಿದ್ದು, ಹೀಗಾಗಿ ಮಡಿಕೇರಿಯ ಸ್ವಚ್ಚತೆ ಬಗ್ಗೆ ತನಗೂ ಕಾಳಜಿ ಇದೆ ಎಂದೂ ದೇವದಾಸ್ ಹೇಳಿದರು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ಕಾನೂನು ಪ್ರತಿಪಾದಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವ ವಕೀಲರು ಸ್ವತಹ ಕಾನೂನನ್ನು ಪಾಲಿಸುವ ಮೂಲಕ ಆದಶ೯ಪ್ರಾಯರಾಗಿ ಜೀವಿಸುವುದು ಮುಖ್ಯ ಎಂದರಲ್ಲದೇ, ನ್ಯಾಯಾಲಯದ ಒಳಗೆ ಮತ್ತು ನ್ಯಾಯಾಲಯದ ಹೊರಗಡೆಯೂ ವಕೀಲರು ತವ್ವ ವ್ಯಕ್ತಿತ್ವಕ್ಕೆ ಕುಂದು ಬಾರದಂತೆ ವತಿ೯ಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿ ವಕೀಲರ ಸಂಘದ ಪ್ರಧಾನ ಕಾಯ೯ದಶಿ೯ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ.ನಾಗರಾಜ್, ಖಜಾಂಜಿ ಜಿ.ಆರ್.ರವಿಶಂಕರ್ ವೇದಿಕೆಯಲ್ಲಿದ್ದರು, ಉಪಾಧ್ಯಕ್ಷ ಪವನ್ ಪೆಮ್ಮಯ್ಯ, ಜಿತೇಂದ್ರ, ಕಪಿಲ್ ಕುಮಾರ್ ಕಾಯ೯ಕ್ರಮ ನಿವ೯ಹಿಸಿದರು. ವಕೀಲರ ಸಾಧಕ ಮಕ್ಕಳಿಗೆ ಬಹುಮಾನ ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದ ವಕೀಲರಿಗೆ ಬಹುಮಾನ ವಿತರಿಸಲಾಯಿತು. ವಕೀಲ ವೃಂದದಿಂದ ಆಕಷ೯ಕ ಸಾಂಸ್ಕೃತಿಕ ಕಾಯ೯ಕ್ರಮಗಳು ಮನಸೆಳೆದವು.
ಸಕಾ೯ರದ ಟ್ರಬಲ್ ಶೂಟರ್ ಪೊನ್ನಣ್ಣ…! :: ಕೊಡಗಿನ ಹೆಸರಾಂತ ರಾಜಕಾರಣಿ, ವಕೀಲ ಎ.ಕೆ.ಸುಬ್ಬಯ್ಯ ರಾಜ್ಯದಲ್ಲಿ ಫೈರ್ ಬ್ರಾಂಡ್ ಆಗಿದ್ದರೆ ಅವರ ಮಗ ಎ.ಎಸ್ .ಪೊನ್ನಣ್ಣ ಸೂಪರ್ ಫ್ರೈರ್ ಬ್ರಾಂಡ್ ಆಗಿದ್ದಾರೆ ಎಂದು ರಾಜ್ಯ ಸಕಾ೯ರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್.ದೇವದಾಸ್ ಶ್ಲಾಘಿಸಿದರು. ಎ.ಕೆ.ಸುಬ್ಬಯ್ಯ ಅವರೊಂದಿಗಿನ ತಮ್ಮ ನೆನಪುಗಳನ್ನು ಸವಿಸ್ತಾರವಾಗಿ ದೇವದಾಸ್ ವಕೀಲರ ದಿನಾಚರಣೆ ಸಂದಭ೯ ಸಭಿಕರ ಮುಂದಿಟ್ಟರು. ವಕೀಲರ ಅತ್ಯಗತ್ಯವಾಗಿದ್ದ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಅವರನ್ನು ಮಡಿಕೇರಿ ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ಈ ಸಂದಭ೯ ಪೊನ್ನಣ್ಣ ಅವರನ್ನು ರಾಜ್ಯ ಸಕಾ೯ರದ ಟ್ರಬಲ್ ಶೂಟರ್ ಎಂದು ವಕೀಲ ಸಮೂಹದ ಅಭಿನಂದನಾ ಪತ್ರದಲ್ಲಿ ವಣಿ೯ಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ, ಮುಖ್ಯಮಂತ್ರಿಗಳ ವಿರುದ್ದದ ಮೂಡಾ ಹಗರಣದ ಸಂದಭ೯ ದೇಶದ ಅತ್ಯಂತ ಖ್ಯಾತನಾಮ ವಕೀಲರ ಜತೆ ಸಂಪಕ೯ ಹೊಂದಲು ತನಗೆ ಸಾಧ್ಯವಾಯಿತು, ಕಪಿಲ್ ಸಿಬ್ಬಲ್ ಅವರಂಥ ಹಿರಿಯ ವಕೀಲರೊಂದಿಗಿನ ಚಚೆ೯ ಸಂದಭ೯ದಲ್ಲಿ ರಾಜಕೀಯ ಭೇಧವಿಲ್ಲದೇ ನಾನಿ ಫಾಲ್ಕಿವಾಲಾರಂಥ ದಿಗ್ಗಜ ವಕೀಲರ ಕಾಯ೯ವೈಖರಿಯನ್ನು ಸ್ಮರಿಸಿಕೊಳ್ಳುವ ಅವಕಾಶ ಅವರಿಂದ ತನಗೆ ದೊರಕಿತ್ತು ಎಂದರು. ತಾನು ಹೈಕೋಟ್೯ ವಕೀಲನಾಗಿದ್ದ ಸಂದಭ೯ ರಾಜಕೀಯ ಭಿನ್ನಮತಗಳನ್ನು ಮರೆತು ಎಲ್ಲಾ ಪಕ್ಷದವರೂ ತನ್ನಲ್ಲಿ ಕಕ್ಷಿದಾರರಾಗಿ ಬರುತ್ತಿದ್ದರು, ವಿಧಾನಸಭಾ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಿಂದ ತನ್ನ ವಿರುದ್ದ ಸ್ಪಧಿ೯ಸಿದ್ದವರೂ ತನ್ನ ಕಕ್ಷಿದಾರರೇ ಆಗಿದ್ದರು, ಬಹುಷ ಚುನಾವಣೆಯಲ್ಲಿ ತಾನು ಸ್ಪಧಿ೯ಸುವ ವಿಚಾರ ಗೊತ್ತಿದ್ದರೆ ಅವರು ನನ್ನ ಬಳಿ ಕಕ್ಷಿದಾರರಾಗಿ ಬರುತ್ತಿರಲಿಲ್ಲವೋ ಏನೋ ಎಂದೂ ಪೊನ್ನಣ್ಣ ಹಾಸ್ಯ ಮಿಶ್ರಿತವಾಗಿ ಹೇಳಿದರು. ಇದೇ ಸಂದಭ೯ ಮಡಿಕೇರಿ ನ್ಯಾಯಾಲಯಕ್ಕೆ 1,30 ಕೋಟಿ ರು ವೆಚ್ಚದಲ್ಲಿ ತಡೆಗೋಡೆ ಕಾಮಗಾರಿಗೆ ಶೀಘ್ರ ಸಕಾ೯ರದ ಮಂಜುರಾತಿ ನೀಡುವಂತೆ ವಕೀಲರ ಸಂಘದ ವತಿಯಿಂದ ಅಧ್ಯಕ್ಷ ನಿರಂಜನ್ ಅವರು ಪೊನ್ನಣ್ಣ ಅವರಿಗೆ ಬೇಡಿಕೆಯ ಮನವಿ ಪತ್ರ ನೀಡಿದರು.