ಮಡಿಕೇರಿ ಡಿ.3 NEWS DESK : ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ನ ಧರ್ಮಪ್ರಸಾರ ವಿಭಾಗದ ವತಿಯಿಂದ ಸಂತರ ಪಾದಯಾತ್ರೆ ಹಾಡಿಯ ಕಡೆಗೆ ಕಾರ್ಯಕ್ರಮ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿಯಲ್ಲಿ ನಡೆಯಿತು. ಸಿದ್ದಲಿಂಗಪುರ ಅರಶಿನ ಕುಪ್ಪೆ ಶ್ರೀಮಂಜುನಾಥ ಸ್ವಾಮಿ ಕ್ಷೇತ್ರದ ಶ್ರೀ ರಾಜೇಶ್ ನಾಥ್ ಯೋಗಿ ಗುರುಗಳು ತಿತಿಮತಿ ಸಮೀಪದ ಬುಡಕಟ್ಟು ಜನಾಂಗದ ಹಾಡಿಗಳಿಗೆ ಭೇಟಿ ನೀಡಿ ಹಿಂದೂ ಧರ್ಮದ ಮಹತ್ವದ ಕುರಿತು ವಿವರಿಸಿದರು.
ಹಾಡಿವಾಸಿಗಳು ಗುರುಗಳನ್ನು ಶ್ರದ್ಧಾಭಕ್ತಿಯಿಂದ ಬರ ಮಾಡಿಕೊಂಡರು. ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಪ್ರಮುಖರು ಹಾಗೂ ಪೊನ್ನಂಪೇಟೆ ಪ್ರಖಂಡದ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.