ಚೆಟ್ಟಳ್ಳಿ ಫೆ.1 NEWS DESK : ಪದ್ಮಶ್ರೀ ವಿಜೇತ ರೋಹನ್ ಬೋಪಣ್ಣ ಅವರ ಹೆಸರನ್ನು ಮಡಿಕೇರಿ ನಗರದ ಮುಖ್ಯ ರಸ್ತೆಗೆ ಇಡುವಂತೆ ಅಖಿಲ ಕೊಡವ ಸಮಾಜ ಒತ್ತಾಯಿಸಿದೆ.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರಿಗೆ ಮನವಿ ಸಲ್ಲಿಸಿದ ಸಮಾಜದ ಪ್ರಮುಖರು, ವಿಶ್ವದ ಡಬಲ್ಸ್ ಮೆನ್ ಟೆನ್ನಿಸ್ ಕ್ರೀಡೆಯಲ್ಲಿ ದಾಖಲೆಮೆರೆದ ಗೌರವಾರ್ಥ ಪದ್ಮಶ್ರೀ ವಿಜೇತ ರೋಹನ್ ಬೋಪ್ಪಣ್ಣ ಅವರ ಹೆಸರನ್ನು ಮಡಿಕೇರಿ ನಗರದ ಮುಖ್ಯ ರಸ್ತೆಗೆ ಇಡುವಂತೆ ಮನವಿ ಮಾಡಿದರು.
ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಕಾರ್ಯದರ್ಶಿ ಕೀತಿಯಂಡ ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ಮೂವೇರ ರೇಖಾ ಪ್ರಕಾಶ್ ಹಾಗೂ ನಂದೇಟಿರ ರಾಜ ಮಾದಪ್ಪ ಹಾಜರಿದ್ದರು.
ಪೋಷಕರಿಗೆ ಗೌರವ :: ಮಾದಾಪುರ ಸಮೀಪ ಗರಗ0ದೂರಿನ ಪದ್ಮಶ್ರೀ ಮಚ್ಚಂಡ ರೋಹನ್ ಬೋಪಣ್ಣ ಅವರ ಮನೆಗೆ ಸಮಾಜದ ಪ್ರಮುಖರು ತೆರಳಿ, ರೋಹನ್ ಬೋಪಣ್ಣ ಅವರ ಪೋಷಕರಾದ ಮಚ್ಚಂಡ ಪ್ರಭಾ ಬೋಪಣ್ಣ ಹಾಗೂ ಮಲ್ಲಿಕಾ ದಂಪತಿಗೆ ಅಖಿಲ ಕೊಡವ ಸಮಾಜದ ವತಿಯಿಂದ ಹೂಗುಚ್ಚ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ರೋಹನ್ ಬೋಪ್ಪಣ್ಣ ಅವರ ಸಾಧನೆಯನ್ನು ಮೆಚ್ಚಿ ಇದೇ ಸಂದರ್ಭ ಅಖಿಲ ಕೊಡವ ಸಮಾಜದ ಗೌರವ ಸದಸ್ಯತ್ವವನ್ನು ನೀಡಿದರು.