ಮಡಿಕೇರಿ ಫೆ.1 NEWS DESK : ಗೂನಡ್ಕ-ಪೇರಡ್ಕ ಮೋಹಿಯುದ್ದಿನ್ ಜುಮಾ ಮಸ್ಜಿದ್ ಹಾಗೂ ದರ್ಗಾಕ್ಕೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ಭೇಟಿ ನೀಡಿದರು.
ಮಸೀದಿ ಮತ್ತು ಪೇರಡ್ಕ ದರ್ಗಾದ ಇತಿಹಾಸ ಕೇಳಿ, ಈ ಭಾಗದಲ್ಲಿ ಮುಸ್ಲಿಮರು ಮಸೀದಿ ಹಾಗೂ ದರ್ಗಾದಲ್ಲಿ ಶಿಸ್ತು ಉಳ್ಳವರು ಹಾಗೂ ಧಾರ್ಮಿಕ ತಿಳುವಳಿಕೆ ಉಳ್ಳವರು ಎಂದು ಸಂತಸ ವ್ಯಕ್ತಪಡಿಸಿದರು. ನಂತರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾ.ಪಂ ಅಧ್ಯಕ್ಷರಾದ ಸುಮತಿ, ಶಕ್ತಿವೇಲು ಗ್ರಾ.ಪಂ ಉಪಾಧ್ಯಕ್ಷ ಎಸ್.ಕೆ.ಹನೀಫ್, ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಮಹಮದ್ ಕುಂಞಿ ತೆಕ್ಕಿಲ್, ಮಸೀದಿ ಕಾರ್ಯದರ್ಶಿ ಉಸ್ಮಾನ್, ಪಾಂಡಿ ಅಬ್ಬಾಸ್, ಸಾಧುಮೋನ್ ತೆಕ್ಕಿಲ್ ಪೇರಡ್ಕ ಜುರೈದ್ ತೆಕ್ಕಿಲ್ , ಖಲಿಲ್, ಜುನೈದ್ ತೆಕ್ಕಿಲ್, ಮೂಸನ್, ಮೊದಲದವರು ಉಪಸ್ಥಿತರಿದ್ದರು.