ಮಡಿಕೇರಿ ಫೆ.2 NEWS DESK : ಸಂವಿಧಾನ ದಿನಾಚರಣೆಯ ಪ್ರಯುಕ್ತ ಹೊಸ್ಕೇರಿ ಗ್ರಾ.ಪಂ ವತಿಯಿಂದ ಸಂವಿಧಾನ ಜಾಗೃತಿ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು.
ಗ್ರಾಮದ ಯುವಕರು ಉಮೇಶ್ ಹಾಗೂ ಹರೀಶ್ ಮುಂದಾಳತ್ವದಲ್ಲಿ ಬೈಕ್ ಜಾಥಾ ಹಾಗೂ ಸಂಜೀವಿನಿ ಒಕ್ಕೂಟದದಿಂದ ಕಳಶದೊಂದಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಭವ್ಯ ಸ್ವಾಗತ ನೀಡಿದರು.
ನಂತರ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಂವಿಧಾನ ಮಹತ್ವ ಕುರಿತು ಸಂಪನ್ಮೂಲ ವ್ಯಕ್ತಿ ಕೃಷ್ಣ ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷ ಬಡುವಂಡ್ರ ಕವಿತಾ ಮಾತನಾಡಿ ಸಂವಿಧಾನ ಜಾಥಾ ಮಹತ್ವದ ಕುರಿತು ಮಾಹಿತಿ ನೀಡಿದರು.
ಸದಸ್ಯರಾದ ಜನಾರ್ಧನ, ಪಾರ್ವತಿ , ಅರೇಕಾಡು ಸಹಿಪ್ರ ಶಾಲೆ ಎಸ್. ಡಿ.ಎಂ. ಸಿ ಅಧ್ಯಕ್ಷ ಸಾಜಿದ, ಶಿಕ್ಷಕರಾದ ಮೀನಾಕ್ಷಿ, ಸುಷ್ಮಾ, ಅಶ್ರಫ್, ಕಾಲೇಜು ಪ್ರಾಂಶುಪಾಲ ಸುರೇಶ್ ನಾಯ್ಕ್ , ಮುಖೋಪಾಧ್ಯಾಯ ರವಿಕೃಷ್ಣಾ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಪಿಡಿಒ ಅಬ್ದುಲ್ಲ, ಕಾರ್ಯದರ್ಶಿ ತೇಜಸ್ ಕುಮಾರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಪವಿತ್ರ ಅಂಗನವಾಡಿ ಆಶಾ ಕಾರ್ಯಕರ್ತರು, ಗ್ರಾಮಸ್ಥರು, ವಿಧ್ಯಾರ್ಥಿಗಳು ಭಾಗವಹಿಸಿದರು. ಪಂಚಾಯತಿ ಕಾರ್ಯದರ್ಶಿ ತೇಜಸ್ ಕುಮಾರ್ ಸ್ವಾಗತಿಸಿ, ಪೂರ್ಣಿಮಾ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.
ವಿವಿಧ ವಿಭಾಗಗಳಲ್ಲಿ ನಡೆಸಲಾದ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.