ಮಡಿಕೇರಿ ಫೆ.3 NEWS DESK : ಕಡಂಗ ಕೊಕ್ಕಂಡಬಾಣೆ ದರ್ಗಾದಲ್ಲಿ ವಾರ್ಷಿಕವಾಗಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭಕ್ಕೆ ಚಾಲನೆ ದೊರೆಯಿತು.
ನಮಾಜ್ ಬಳಿಕ ಮುಹ್ಯದ್ದೀನ್ ಜುಮಾ ಮಸೀದಿಯಿಂದ ಹೊರಟ ಬೃಹತ್ ಜಾಥವು ದಫ್ ಕಾರ್ಯಕ್ರಮದೊಂದಿಗೆ ಕೊಕ್ಕಂಡಬಾಣೆ ದರ್ಗಾ ಶರೀಫನ ಆವರಣದಲ್ಲಿ ಮುಕ್ತಾಯಗೊಳಿಸಿದರು.
ಜಮಾಹತ್ ಖತೀಬಾರಾದ ಮೊಹಮ್ಮದ್ ರಫೀಕ್ ಲತೀಫಿ ವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿದ್ದು, ಧ್ವಜಾರೋಹಣವನ್ನು ಜಮಹತ್ ಅಧ್ಯಕ್ಷ ಅಬ್ದುಲ್ಲ ನೆರವೇರಿಸಿದರು.
ಮಖಾಂ ಅಲಂಕಾರ ಸಮಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ಶುಹೈಬ್ ಫೈಜಿ ಮಾತನಾಡಿ, ಐದು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಸಮಾರಂಭದಲ್ಲಿ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಸಹ ಕಾರ್ಯದರ್ಶಿ ಪಿ.ಎಚ್ ಸಮೀರ್, ಸಂಸ್ಥೆಯ ಉಪಾಧ್ಯಕ್ಷ ಸಲಾಂ, ಹ್ಯಾರಿಸ್, ಯುಸಫ್ ಉಸ್ತಾದ್, ಬದ್ರಿಯಾ ಜುಮಾ ಮಸೀದಿ, ಖತೀಬಾರಾದ ಇಸ್ಮಾಯಿಲ್ ಲತೀಫಿ, ಕೆ.ಇ.ಉಸ್ಮಾನ್ ,ಊರಿನ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ : ನೌಫಲ್ ಕಡಂಗ