ಮಡಿಕೇರಿ ಫೆ.3 NEWS DESK : ರಾಜ್ಯದ ಎಲ್ಲೆಡೆ ಮಾದಿಗ ಸಮಾಜವನ್ನು ಸಂಘಟಿಸಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢಗೊಳಿಸಿ, ಸಮಾಜದಲ್ಲಿ ಮುಂಚೂಣಿಗೆ ತರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ “ಮಾದಿಗ ಮುನ್ನಡೆ” ಮಾದಿಗರ ಆತ್ಮಗೌರವ ಸಮಾವೇಶವನ್ನು ಕೈಗೊಳ್ಳಲಾಗಿದ್ದು, ಕೊಡಗಿನಲ್ಲಿ ಫೆ.4 ರಂದು ನಡೆಯಲಿದೆ.
ಅಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ರೋಟರಿ ಹಾಲ್ ಸಭಾಂಗಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಜಿ ಹಾಗೂ ಕಗ್ಗುಂಡಿ ಶ್ರೀಗುರು ಹರಳಯ್ಯ ಗುರುಮಠದ ಶ್ರೀ ರುದ್ರಪ್ಪ ಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸಲಿದ್ದು, ಕೋಟೆ ಎಂ.ಶಿವಣ್ಣ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಜಿ.ಶ್ರೀನಿವಾಸ್ ವಹಿಸಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಗದೀಶ್ ಬೆಟ್ಟಹಳ್ಳಿ, ನಾಗೇಂದ್ರ ಹರಕಲವಾಡಿ, ಹೆಚ್.ಕೆ.ಭಾಗ್ಯ, ಬಿ.ಎನ್.ಗಂಗಾಧರಪ್ಪ, ಹೂಡಿ ಮಂಜುನಾಥ್, ಡಾ.ಲಕ್ಷ್ಮೀಕಾಂತ್ ತುಮಕೂರು, ಪಿಳ್ಳಾ ಮುನಿಶಾಮಪ್ಪ, ವಿ.ಕೇಶವ, ಸತ್ಯೇಂದ್ರ ಕುಮಾರ್, ಶ್ರೀನಿವಾಸ್ ಪಾಲ್ಗೊಳ್ಳಲಿದ್ದಾರೆ.