ಮಡಿಕೇರಿ ಫೆ.6 NEWS DESK : ಮಡಿಕೇರಿಯ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಸಮಯದ ಕರೆ – ಸಕಾರಾತ್ಮಕ ಚಿಂತನೆಯ ಬಗ್ಗೆ ವಿಚಾರ ಸಂಕಿರಣ ನಡೆಯಿತು.
ಮುಂಬೈನ ಪ್ರಖ್ಯಾತ ಸ್ಫೂರ್ತಿ ದಾಯಕ ಪ್ರವಚನಕಾರ ಬ್ರಹ್ಮಾಕುಮಾರ್ ಗಿರೀಶ್ ವಿಚಾರ ಸಂಕಿರಣ ನಡೆಸಿಕೊಟ್ಟರು.
ಜಿಲ್ಲಾ ನ್ಯಾಯಾಧೀಶರು ಬಿ.ಕೆ.ಗಿರೀಶ್ ಅವರನ್ನು ಸನ್ಮಾನಿಸಿ, ವರ್ತಮಾನದ ಒತ್ತಡದ ಬದುಕಿಗೆ ಇಂತಹ ಕಾರ್ಯಕ್ರಮಗಳು ಅತೀ ಅವಶ್ಯಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೆಚ್.ಸಿ.ಶ್ಯಾಂ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಬ್ರಹ್ಮಾಕುಮಾರೀಸ್ ನ ಬಿ.ಕೆ.ಧನಲಕ್ಷ್ಮಿ ಅಕ್ಕನವರು ಹಾಗೂ ಬಿ.ಕೆ. ಪ್ರಾಣೇಶಣ್ಣ ಉಪಸ್ಥಿತರಿದ್ದರು. ನ್ಯಾಯಾಧೀಶರುಗಳು, ವಕೀಲರ ಸಂಘದ ಅಧ್ಯಕ್ಷ ನಿರಂಜನ್, ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಾರ್ಯಕ್ರಮ ಬಹಳ ಲಾಭದಾಯಕವಾಗಿದೆಯೆಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.