Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ! ಶ್ರೀಲಂಕಾ ಹವಾಮಾನ ಇಲಾಖೆ ನೀಡಿದ ಆ ಒಂದು ಎಚ್ಚರಿಕೆ ಅಭಿಮಾನಿಗಳಿಗೆ ಬಿಗ್ ಶಾಕ್!*
  • *ವಾಯುಪಡೆ ಸೇರಲು 10th ಪಾಸ್ ಸಾಕು! ತಿಂಗಳಿಗೆ ಭರ್ಜರಿ ಸಂಬಳ; ನಿಮ್ಮ ಜಿಲ್ಲೆಯಲ್ಲೂ ನೇಮಕಾತಿ ಇದೆಯೇ? ಚೆಕ್ ಮಾಡಿ!*
  • *ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*
  • *ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*
  • *ಫ್ರೀ.. ಫ್ರೀ.. ಫ್ರೀ! ಪಿಯುಸಿ ಪರೀಕ್ಷೆ ಬರೆಯುವವರಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಕಂಡಕ್ಟರ್‌ಗೆ ಈ ಒಂದು ಕಾರ್ಡ್ ತೋರಿಸಿದ್ರೆ ಸಾಕು!*
  • *ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ 100 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ*
  • *ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*
  • *16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*
  • *ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*
  • *ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಮಾ.3 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ*
ಇತ್ತೀಚಿನ ಸುದ್ದಿಗಳು

*ಮಾ.3 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ*

February 7, 20243 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ಫೆ.7 NEWS DESK : ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮವು ಮಾ.3 ರಂದು ನಡೆಯಲಿದ್ದು, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಸಿದ್ಧತೆ ಬಗ್ಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಪಂಚಾಯತ್ ರಾಜ್, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪ್ರಾದೇಶಿಕ ಸಾರಿಗೆ ಇಲಾಖೆಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಶಾಲೆಗಳು, ಬಸ್ ನಿಲ್ದಾಣಗಳಲ್ಲಿ ಹಾಗೂ ಜನ ದಟ್ಟಣೆ ಪ್ರದೇಶಗಳಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲು ಸಹಕಾರ ನೀಡಬೇಕು. ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಅಗತ್ಯ ವಾಹನ ನಿಯೋಜಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮ ದಿನದಂದು ವಿದ್ಯುತ್ ಸಂಪರ್ಕವನ್ನು ನಿರಂತರವಾಗಿ ಕಲ್ಪಿಸಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ರೋಟರಿ, ಲಯನ್ಸ್, ರೆಡ್‍ಕ್ರಾಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆಯುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ ಕುಮಾರ್ ಮಾತನಾಡಿ, ಪಲ್ಸ್ ಪೋಲಿಯೋ ಕಾರ್ಯಕ್ರಮವು ಮಾ.3 ರಂದು ಬೂತ್ ಮಟ್ಟದಲ್ಲಿ ನಡೆಯಲಿದೆ. ಮಾರ್ಚ್, 4, 5 ಮತ್ತು 6 ರಂದು ಮೂರು ದಿನಗಳ ಕಾಲ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಹಾಗೂ ಮಾ.4 ಮತ್ತು 5 ರಂದು ಎರಡು ದಿನಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಪೋಲಿಯೋ ಹನಿ ಹಾಕಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಪಲ್ಸ್ ಪೋಲಿಯೋ ಹನಿ ಹಾಕುವ ದಿನಗಳಂದು ಪಂಚಾಯತ್ ರಾಜ್, ಶಿಕ್ಷಣ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪ್ರಾದೇಶಿಕ ಸಾರಿಗೆ ಇಲಾಖೆಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೋರಿದರು.
ಕೊಡಗು ಜಿಲ್ಲೆಯಲ್ಲಿ 5 ವರ್ಷದೊಳಗಿನ ಒಟ್ಟು 42,375 ಮಕ್ಕಳಿದ್ದು, 4,400 ನಗರ ಪ್ರದೇಶದ ಮಕ್ಕಳು ಹಾಗೂ 37,975 ಗ್ರಾಮೀಣ ಪ್ರದೇಶದ ಮಕ್ಕಳು ಇದ್ದಾರೆ. ಹಾಗೆಯೇ 5 ವರ್ಷದೊಳಗಿನ ವಲಸಿಗ ಮಕ್ಕಳು ಸೇರಿದಂತೆ ಪೋಲಿಯೋ ಹನಿ ಹಾಕಲಾಗುತ್ತದೆ ಎಂದು ಡಾ.ಸತೀಶ್ ಕುಮಾರ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪೋಲಿಯೋ ಹನಿ ಹಾಕುವ ನಿಟ್ಟಿನಲ್ಲಿ 464 ಬೂತ್‍ಗಳನ್ನು ಸ್ಥಾಪಿಸಲಾಗಿದೆ. 30 ಸಂಚಾರಿ ಬೂತ್‍ಗಳು, 6 ಮೊಬೈಲ್ ತಂಡಗಳನ್ನು ನಿಯೋಜಿಸಲಾಗುತ್ತದೆ. ಜೊತೆಗೆ 1928 ಲಸಿಕಾದಾರರು, 86 ಮಂದಿ ಮೇಲ್ವಿಚಾರಕರು, ಹಾಗೆಯೇ 924 ಮಂದಿ ಮನೆ ಮನೆಗೆ ಭೇಟಿ ನೀಡುವ ತಂಡವನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ 80 ವಾಹನಗಳು ಅಗತ್ಯವಿದ್ದು, ವಾಹನ ನಿಯೋಜನೆಗೆ ಸಹಕರಿಸುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಯವರಲ್ಲಿ ಡಿಎಚ್‍ಒ ಕೋರಿದರು.
ಪ್ರವಾಸಿ ಸ್ಥಳಗಳು, ಬಸ್ ನಿಲ್ದಾಣಗಳಲ್ಲಿ ಪೋಲಿಯೋ ಬೂತ್ ತೆರೆಯಲು ಅವಕಾಶ ಮಾಡಬೇಕು. ಕಾರ್ಮಿಕರ ಮಕ್ಕಳು, ಕೊಳಗೇರಿ ಪ್ರದೇಶದಲ್ಲಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲು ಸಹಕರಿಸುವಂತೆ ಕೋರಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಾಭಿವೃದ್ಧಿ, ಕಾರ್ಮಿಕ, ಪೊಲೀಸ್, ವೈದ್ಯಕೀಯ ಶಿಕ್ಷಣ, ಸೆಸ್ಕ್, ಕೆಎಸ್‍ಆರ್‍ಟಿಸಿ, ಪ್ರವಾಸೋದ್ಯಮ ಹೀಗೆ ಎಲ್ಲಾ ಇಲಾಖೆಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಅವರು ಮಾಹಿತಿ ನೀಡಿ ರೆಡ್‍ಕ್ರಾಸ್ ಸಂಸ್ಥೆಯಲ್ಲಿ ಒಂದು ವಾಹನವಿದ್ದು, ಒದಗಿಸಲಾಗುವುದು ಎಂದರು. ರೋಟರಿ ಮಿಸ್ಟಿಹಿಲ್ಸ್ ನಿರ್ದೇಶಕರಾದ ಡಾ.ಚೇತನ್. ರೋಟರಿ ಸಂಸ್ಥೆಯ ಅಚ್ಚಯ್ಯ, ರೋಟರಿಯನ್ ಮ್ರಾನಳಿನಿ ಅವರು ಈ ಹಿಂದಿನಂತೆ ಪಲ್ಸ್ ಪೊಲಿಯೊ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶ್ರೀನಿವಾಸ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚೇತನ್, ಇಂಧುದರ್, ಪ್ರಮೋದ್ ರೈ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜು, ಪೌರಾಯುಕ್ತರಾದ ವಿಜಯ್, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ಪ್ರಾದೇಶಿಕ ಸಾರಿಗೆ ಕಚೇರಿಯ ಮೇಲ್ವಿಚಾರಕಿ ಸಲೀಮ, ಇತರರು ಇದ್ದರು.

Share. Facebook Twitter Pinterest LinkedIn Tumblr Email WhatsApp
Previous Article*ಬಿ.ಎನ್.ಲಾವಣ್ಯ ಗೆ ಸುವರ್ಣ ಶ್ರೀ ಕನ್ನಡ ಪ್ರಶಸ್ತಿ*
Next Article *ಕೊಡಗು : ಮಾ.9 ರಂದು ರಾಷ್ಟ್ರೀಯ ಲೋಕ್ ಅದಾಲತ್*

Website design development company services in Mangalore

Forex Trading Teacher in India

Related Posts

*ವಾಯುಪಡೆ ಸೇರಲು 10th ಪಾಸ್ ಸಾಕು! ತಿಂಗಳಿಗೆ ಭರ್ಜರಿ ಸಂಬಳ; ನಿಮ್ಮ ಜಿಲ್ಲೆಯಲ್ಲೂ ನೇಮಕಾತಿ ಇದೆಯೇ? ಚೆಕ್ ಮಾಡಿ!*

February 14, 2026

*ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*

February 14, 2026

*ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*

February 13, 2026

*ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*

February 14, 2026

ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್ (IPL) ಪಂದ್ಯಗಳನ್ನು…

*ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*

February 13, 2026

*ಫ್ರೀ.. ಫ್ರೀ.. ಫ್ರೀ! ಪಿಯುಸಿ ಪರೀಕ್ಷೆ ಬರೆಯುವವರಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಕಂಡಕ್ಟರ್‌ಗೆ ಈ ಒಂದು ಕಾರ್ಡ್ ತೋರಿಸಿದ್ರೆ ಸಾಕು!*

February 13, 2026

*ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ 100 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ*

February 13, 2026

*ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*

February 13, 2026

*16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*

February 13, 2026

*ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*

February 13, 2026

*ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*

February 13, 2026

*ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ. ಮೈಸೂರು ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ರವರ ನೇತೃತ್ವದಲ್ಲಿ ಜರುಗಿದ ದಿವ್ಯ ಬಲಿಪೂಜೆ*

February 13, 2026

*ಫೆ.15 ರಂದು ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ*

February 13, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.