ಮಡಿಕೇರಿ ಫೆ.8 NEWS DESK : ನಂಜನಗೂಡಿನಲ್ಲಿ ನಡೆದ 26ನೇ ಶೋರಿನ್ ಕಾಯ್ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ 8 ವರ್ಷದ ಬಾಲಕರ ವಿಭಾಗದಲ್ಲಿ ಕೊಡಗಿನ ಕೆ.ಎಸ್.ಧುವಿನ್ ಅಯ್ಯಪ್ಪ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.
ಹಾಸನದ ನಟರಾಜ್ ಕರಾಟೆ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಧುವಿನ್ ಹಾಸನದ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಧುವಿನ್ ಕೋಳುಮಾಡಂಡ ಶರಣು ಮಾಚಯ್ಯ, ಬೀನಾ ದಂಪತಿಯ ಪುತ್ರ ಹಾಗೂ ಎಳ್ತಂಡ ಸಿ.ನಾಣಯ್ಯ ಅವರ ಮೊಮ್ಮಗ.







