ಮಡಿಕೇರಿ ಫೆ.13 NEWS DESK : ನಿಟ್ಟೂರು ಗ್ರಾಮ ಪಂಚಾಯಿತಿ, ಪವಿ ಸ್ವಯಂ ಸೇವಾ ಟ್ರಸ್ಟ್ , ಶಿವಶಕ್ತಿ ಸ್ವಸಹಾಯ ಸಂಘ ಕಾರ್ಮಾಡು, ನಿಟ್ಪೂರು ಗ್ರಾಮದ ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು.
ನಿಟ್ಟೂರು ಮುಖ್ಯ ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಬದಿಯಲ್ಲಿ ಎಸೆಯಲಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸಾರ್ವಜನಿಕರಿಗೆ ಕಸ ಎಸೆಯದಂತೆ ಮತ್ತು ಪ್ಲಾಸ್ಟಿಕ್ ಕೈ ಚೀಲಗಳನ್ನು ಬಳಸದಂತೆ ಅರಿವು ಮೂಡಿಸುವ ಕಾರ್ಯ ನಡೆಯಿತು.
ಪವಿ ಸ್ವಯಂ ಸೇವಾ ಸಂಸ್ಥೆಯ ಸಂಚಾಲಕಿ ಅಳಮೇಂಗಡ ಮಾಳವಿಕಾ ಮಾತನಾಡಿ, ಕಸವನ್ನು ಕಂಡಕಂಡಲ್ಲಿ ಎಸಯದೆ ನಿಗದಿತ ಸ್ಥಳದಲ್ಲಿ ಹಾಕುವ ಹವ್ಯಾಸವನ್ನು ಮಕ್ಕಳಿಗೆ ಮನೆಗಳಲ್ಲಯೇ ಕಲಿಸುವ ಕೆಲಸ ಅರಂಭವಾಗಿ ಶಾಲೆಗಳಲ್ಲಿ ಈ ಕಾರ್ಯದ ಮುಂದುವರಿದ ಭಾಗವನ್ನು ಕಲಿಸುವ ಕೆಲಸ ನಡೆಯಬೇಕು ಮತ್ತು ಈ ರೀತಿಯ ಸ್ವಚ್ಚತಾ ಅಭಿಯಾನಗಳು ನಡೆಯುವಾಗ ಗ್ರಾಮದ ಪ್ರತಿ ಮನೆಯಿಂದ ಕನಿಷ್ಠ ಒಬ್ಬರಾದರು ಭಾಗವಹಿಸಿ ಸ್ವಚ್ಚ ಭಾರತ್ ಅಭಿಯಾನದ ಪರಿಕಲ್ಪನೆಯನ್ನು ತಮ್ಮ ತಮ್ಮ ಮನೆಗಳಿಗೆ ರವಾನಿಸಬೇಕೆಂದು ಕರೆ ನೀಡಿದರು.
ನಿಟ್ಪೂರು ಗ್ರಾ.ಪಂ ಅಧ್ಯಕ್ಷರಾದ ಅಮ್ಮಣಿ, ಉಪಾಧ್ಯಕ್ಷರಾದ ಚಕ್ಕೇರ ಅಯ್ಯಪ್ಪ, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಅಮ್ಮಯ್ಯ,ರಾಜು ಶಿವಶಕ್ತಿ ಸ್ವಸಹಾಯ ಸಂಘದ ಸಂಚಾಲಕರಾದ ಕವಿತಾ, ಸಂಜೀವಿನಿ ಒಕ್ಕೂಟದ ಪ್ರಮುಖರಾದ, ಅಳಮೇಂಗಡ ಲಕ್ಷ್ಮೀ ರಾಜಪ್ಪ, ಬೊಟ್ಪಂಗಡ ಸೀಮಾ, ಪೊನ್ನಿಮಾಡ ವಾಣಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸ್ವಸಹಾಯ ಸಂಘಗಳ ಮಹಿಳಾ ಮತ್ತು ಪುರುಷ ಸದಸ್ಯರು ಪಾಲ್ಗೊಂಡಿದ್ದರು.