ಮಡಿಕೇರಿ ಫೆ.15 NEWS DESK : ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ 2023-24ನೇ ಸಾಲಿನ ಜಿಲ್ಲಾ ಮಟ್ಟದ ನೋಂದಾಯಿತ ಕ್ಲಬ್ ನಡುವಿನ ಲೀಗ್ ಫುಟ್ಬಾಲ್ ಪಂದ್ಯವಾಳಿಯು ಮಾರ್ಚ್ 26 ರಿಂದ 31ರವರೆಗೆ ಅಮ್ಮತ್ತಿಯ ಫ್ರೌಡಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಂದಿಕಂಡ ನಾಗೇಶ್ (ಈಶ್ವರ್) ತಿಳಿಸಿದ್ದಾರೆ.
ಈ ಬಾರಿಯ 16 ತಂಡಗಳ ನಡುವೆ ಲೀಗ್ ಪಂದ್ಯವಾಳಿ ನಡೆಯಲಿದ್ದು, ಸಿ.ಆರ್.ಎಸ್ ನಲ್ಲಿ ಆಟಗಾರರನ್ನು ನೋಂದಾಯಿಸಿದ ತಂಡಗಳಿಗೆ ಮಾತ್ರ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಇದೇ ಫೆಬ್ರವರಿ 24 ಮಧ್ಯಾಹ್ನ ಎರಡು ಗಂಟೆಗೆ ಎಲ್ಲಾ ಕ್ಲಬ್ ಗಳ ಪದಾಧಿಕಾರಿಗಳ ಸಭೆಯನ್ನು ಅಮ್ಮತ್ತಿಯ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಛೇರಿಯಲ್ಲಿ ಕರೆಯಲಾಗಿದ್ದು, ಸಭೆಯಲ್ಲಿ ಜಿಲ್ಲಾ ಮಟ್ಟದ ಲೀಗ್ ಬಗ್ಗೆ ಮಾಹಿತಿ ನೀಡಲಾಗುವುದೆಂದು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ನಾಗೇಶ್ ಮಾಹಿತಿ ನೀಡಿದ್ದಾರೆ.









