ಸೋಮವಾರಪೇಟೆ ಫೆ.19 NEWS DESK : ತಾಲ್ಲೂಕಿನ ಗರ್ವಾಲೆ ಗ್ರಾಮದ ಗೀಜಿಗಂಡ ಸಂತೋಷ್ ಎಂಬುವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ನಡೆದಿದೆ.
ರಸ್ತೆ ಬದಿಯ ಕಾಡಿಗೆ ಬೆಂಕಿ ಬಿದ್ದು ಪಕ್ಕದ ಕಾಫಿ ತೋಟಕ್ಕೂ ವ್ಯಾಪಿಸಿ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣೆಯವರು ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಈ ಭಾಗದಲ್ಲಿ ಕೋಟೆ ಬೆಟ್ಟ ಸೇರಿದಂತೆ ಹಲವು ಪ್ರವಾಸಿ ತಾಣಗಳಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಧೂಮಪಾನ ಮಾಡಿ ಎಸೆದ ಸಿಗರೇಟ್‍ನಿಂದ ಬೆಂಕಿ ಹತ್ತಲು ಕಾರಣವಾಗಿರಬಹುದು ಎಂದು ಸ್ಥಳೀಯ ನಿವಾಸಿ ಗೀಜಿಗಂಡ ಲೋಕೇಶ್ ಹೇಳಿದ್ದಾರೆ.
ಬಿಸಿಲು ಹೆಚ್ಚಾಗುತ್ತಿರುವುದರಿಂದ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ತಿಳಿಸಿದರು.









