ಸಿದ್ದಾಪುರ ಫೆ.21 NEWS DESK : ಕೊಡಗಿನ ಬಡವರ ಬೆಳಕು ಸಂಸ್ಥೆಯ ಸ್ಥಾಪಕರಾಗಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಕುಶಾಲನಗರದ ಎಂ.ಎಚ್. ಮೊಹಮ್ಮದ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕುಶಾಲನಗರದಲ್ಲಿ ನಡೆದ ಅಭಿನಂದನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ, ಎಂ.ಹೆಚ್.ಮೊಹಮ್ಮದ್, 2019ರಲ್ಲಿ ಆರಂಭಗೊಂಡ ಸಂಸ್ಥೆ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ನೊಂದವರಿಗೆ ಸಹಾಯ ಹಸ್ತ ನೀಡಲಾಗಿದೆ. ಬಡ ಜನತೆಗೆ ಮನೆ ಕಟ್ಟಿಸಿ ಕೊಡುವುದು ಮತ್ತು ಆರ್ಥಿಕ ನೆರವು ನೀಡುವುದು, ಶಿಕ್ಷಣ ಹಾಗೂ ವೈದ್ಯಕೀಯ ಚಿಕಿತ್ಸೆಗೆ ನೆರವು ಸೇರಿದಂತೆ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸದಸ್ಯರುಗಳ ಸಹಕಾರದೊಂದಿಗೆ ಮುನ್ನಡೆಯುತ್ತಿದೆ. ವಿರಾಜಪೇಟೆ ತಾಲೂಕಿನ ಗುಂಡಿಗೆರೆಯಲ್ಲಿ ಬಡ ಕುಟುಂಬಕ್ಕೆ 12 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಗಿದೆ ಎಂದರು.
ಮಾಲ್ದಾರೆಯಲ್ಲಿ ರೂ.5 ಲಕ್ಷದಲ್ಲಿ ಮನೆ ನಿರ್ಮಿಸಿ ನೀಡಲಾಗಿದೆ ಮತ್ತು ಕೊಂಡಗೇರಿ ಗ್ರಾಮದಲ್ಲಿ ಮನೆಯೊಂದು ನಿರ್ಮಾಣ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದರು. ಧರ್ಮ ಭೇದವಿಲ್ಲದೆ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ಕೆ ಧನ ಸಹಾಯ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎ.ಬಿ.ಮೂಸಾ, ಕಾರ್ಯದರ್ಶಿ ಬಶೀರ್ (ಮಾಜಿ ಸೈನಿಕ ), ನಿರ್ದೇಶಕರಾದ ಕೆ.ಸಿ.ಮೊಯಿದಿನ್ ಮತ್ತು ನೌಶಾದ್ ಜನ್ನತ್ತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.