ಮಡಿಕೇರಿ ಫೆ.21 NEWS DESK : ಭಾರತೀಯ ಜನತಾ ಪಾರ್ಟಿಯ ಎಸ್‌ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಪಿ.ಕೆ.ಚಂದ್ರು ಹಾಗೂ ಸೋಮವಾರಪೇಟೆ ತಾಲ್ಲೂಕು ಮಂಡಲ ಅಧ್ಯಕ್ಷರನ್ನಾಗಿ ಜಿ.ಜಗನ್ನಾಥ್ ಅವರನ್ನು ನೇಮಕ ಮಾಡಿರುವುದಾಗಿ ಮೋರ್ಚಾದ ನೂತನ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮೊಗೇರ ತಿಳಿಸಿದ್ದಾರೆ.
ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆ ಮೇರೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಸ್‌ಸಿ ಮೋರ್ಚಾವನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳು ಹಾಗೂ ಮಂಡಲ ಅಧ್ಯಕ್ಷರನ್ನು ನೇಮಕ ಮಾಡಿ ಎಸ್‌ಸಿ ಮೋರ್ಚಾವನ್ನು ಸಂಘಟಿಸಲಾಗುವುದು. ಸಧ್ಯದಲ್ಲೇ ಎಸ್.ಸಿ.ಮೋರ್ಚದ ಸಭೆ ನಡೆಸಲಾಗುವುದೆಂದು ರವಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.










