ಮಡಿಕೇರಿ ಫೆ.21 NEWS DESK : ಗುಜರಾತ್ ನಲ್ಲಿ ನಡೆದ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೈನೋ ಬ್ರೈನ್ ಸಂಸ್ಥೆಯ ವಿದ್ಯಾರ್ಥಿ 6 ವರ್ಷದ ಆಹಾನ್ ಬನ್ವಾಲ್ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾನೆ.
ಗುಜರಾತ್ ರಾಜ್ಯ ಉದಯಪುರದ ಮೂಲ ನಿವಾಸಿಗಳಾಗಿರುವ ಅಭಿಷೇಕ್ ಕುಮಾರ್ ಬನ್ವಾಲ್ ಮತ್ತು ಸ್ಮಿತಾ ಶೇಖರ್ ದಂಪತಿಗಳ ಪುತ್ರ ಆಹಾನ್ ಬನ್ವಾಲ್ ಮಡಿಕೇರಿ ಬ್ರೈನೋಬ್ರೈನ್ ಸಂಸ್ಥೆಯ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರಿಂದ ಅಬಾಕಸ್ ತರಬೇತಿ ಪಡೆಯುತ್ತಿದ್ದಾನೆ.
ಗುಜರಾತ್ ರಾಜ್ಯ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಒಟ್ಟು 700 ಮಕ್ಕಳು ಭಾಗಿಯಾಗಿದ್ದು, ಈ ಸ್ಪರ್ಧೆಯಲ್ಲಿ ಆಹಾನ್ ಬನ್ವಾಲ್ ಚಾಂಪಿಯನ್ನಾಗಿರುವುದು ಪ್ರಶಂಷನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.












