ಮಡಿಕೇರಿ ಫೆ.22 NEWS DESK : ಗೋಣಿಕೋಪ್ಪಲಿನ ಕಾವೇರಿ ಕಾಲೇಜಿನಲ್ಲಿ ಫೆ.25 ರಂದು ಬೆಳಗ್ಗೆ 08 ಗಂಟೆಯಿಂದ ಮುಖ್ಯಾಲಯ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಬೆಂಗಳೂರು ಇವರ ವತಿಯಿಂದ ಮಾಜಿ ಸ್ಯೆನಿಕರ ರ‍್ಯಾಲಿ ನಡೆಯಲಿದೆ.
ಕೊಡಗು ಜಿಲ್ಲೆಯ ಎಲ್ಲಾ ಮಾಜಿ ಸ್ಯೆನಿಕರು ಮತ್ತು ಅವರ ಅವಲಂಬಿತರು ಕುಂದುಕೊರತೆಗಳು ಹಾಗೂ ಇತರೆ ಪಿಂಚಣಿ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮ ಮೂಲ ಸೇನಾ ದಾಖಲಾತಿಗಳೊಂದಿಗೆ ಆಧಾರ್ ಕಾರ್ಡ್, ಪಿಂಚಣಿ ಪಡೆಯುತ್ತಿರುವ ಬ್ಯಾಂಕ್ ಖಾತೆಯ ಪಾಸ್ ಪುಸ್ತಕ, ಪಾನ್ ಕಾರ್ಡ ಹಾಗೂ ಬ್ಯಾಂಕ್ ಖಾತೆ, ಸ್ಪರ್ಶ್ ಮತ್ತು ಆಧಾರ್‍ಗೆ ನೋಂದಣಿಯಾದ ಮೊಬೈಲ್ ಸಂಖ್ಯೆ ಹಾಗೂ ಎಲ್ಲಾ ದಾಖಲಾತಿಗಳ ನೆರಳಚ್ಚು ಪ್ರತಿಗಳೊಂದಿಗೆ ಫೆ.16 ರೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮುಖ್ಯ ರಸ್ತೆ, ಮಡಿಕೇರಿ ಇವರಲ್ಲಿ ತಮ್ಮ ತಮ್ಮ ಕುಂದುಕೂರತೆಗಳನ್ನು ನೋಂದಾಯಿಸಿಕೊಳ್ಳಬೇಕು.
ತಮ್ಮ ಎಲ್ಲಾ ದಾಖಲಾತಿಗಳನ್ನು ರ್ಯಾಲಿಯ ದಿನದಂದು ತರುವುದು. ಕೊಡಗು ಜಿಲ್ಲೆಯ ಎಲ್ಲಾ ಮಾಜಿ ಸ್ಯೆನಿಕರು ಮತ್ತು ಅವರ ಅವಲಂಬಿತರು ಇದರ ಸದುಪಯೂಗ ಪಡೆದುಕೋಳ್ಳಬೇಕೆಂದು ಈ ಮೂಲಕ ಕೋರಲಾಗಿದೆ ಎಂದು ಕರ್ನಲ್ ವೆಟರನ್ ಮುಖ್ಯಾಲಯ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









