ಮಡಿಕೇರಿ ಫೆ.24 NEWS DESK : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ ಮತ್ತು ಪ.ಪಂ ನೌಕರರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಸಂವಿಧಾನ ಜಾಗೃತಿ ಸಮಾವೇಶ ನಡೆಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಬಿ.ಜಯಶಂಕರ ಶೆಟ್ಟಿ ಉದ್ಘಾಟಿಸಿದರು. ನಂತರ ಗಣ್ಯರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ನಂದಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಎಂ.ಇ.ಎಸ್.ಕಾಲೇಜಿನ ಉಪನ್ಯಾಸಕ ಡಾ.ರವಿ ಅಪ್ಪಗೆರೆ, ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ್, ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗ ಕಾರ್ಮಿಕ ಕಲ್ಯಾಣಧಿಕಾರಿ ಕೆ.ಕೆ.ಸೋಮಶೇಖರ್, ಮಡಿಕೇರಿ ಘಟಕ ವ್ಯವಸ್ಥಾಪಕ ಹೆಚ್.ಇ.ವೀರಭದ್ರಸ್ವಾಮಿ, ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಟಿ.ಸುರೇಶ್ ಕಂಠಿ, ಪುತ್ತೂರು ವಿಭಾಗ ತನಿಖೆದಳದ ಸಾರಿಗೆ ಸಂಚಾರಿ ನಿರ್ದೇಶಕ ಜಯಣ್ಣ, ಕೆ.ರಾ.ರ.ಸಾ.ನಿ ಪಾ ಜಾ/ಪ ಪಂ ವರ್ಗಗಳ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶ್ರೀನಿವಾಸ್, ಪುತ್ತೂರು ವಿಭಾಗ ಪಾ.ಜಾ/ಪ.ಪಂ ವರ್ಗಗಳ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಮಡಿಕೇರಿ ಘಟಕ ಸಂಚಾರಿ ಅಧೀಕ್ಷಕ ಈರಸಪ್ಪ, ತಾಜಾ ವರ್ಗಗಳ ನೌಕರರ ಸಂಘ ಮಡಿಕೇರಿ ಘಟಕದ ಅಧ್ಯಕ್ಷ ರಾಮಚಂದ್ರ, ಮಡಿಕೇರಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತರ ಸಮಿತಿ ಸದಸ್ಯೆ ಜಯಂತಿ, ಮಡಿಕೇರಿ ತಾಲ್ಲೂಕು ಆಶಾ ಕಾರ್ಯಕರ್ತರ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಡಿಎಸ್‍ಎಸ್ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು, ಅಂಬೇಡ್ಕರ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ವೈ.ಪ್ರಕಾಶ್, ದಲಿತ ಮುಖಂಡರಾದ ಡಿ.ಎಸ್.ನಿರ್ವಾಣಪ್ಪ, ಎಂ.ಪಿ.ಹೂನ್ನಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.








