ಮಡಿಕೇರಿ ಫೆ.24 NEWS DESK : ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಫೆ.29 ರಿಂದ ಮಾ.9ರ ವರೆಗೆ ಮಹಾಶಿವರಾತ್ರಿ ಮಹೋತ್ಸವವು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನಡೆಯಲಿದೆ.
ಫೆ.29 ರಂದು ಬೆಳಿಗ್ಗೆ 9.30 ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, ಸಂಜೆ 6.30 ಗಂಟೆಗೆ ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯ ಮಹಿಳಾ ಭಜನಾ ತಂಡ ಹಾಗೂ ಮೇಕೇರಿ ಶ್ರೀ ಗೌರಿಶಂಕರ ದೇವಾಲಯದ ಭಜನಾ ಸಮಿತಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಾ.1 ರಂದು ಸಂಜೆ 6.30 ಗಂಟೆಗೆ ಹಾಕತ್ತೂರು-ತೊಂಬತ್ತುಮನೆ ಶ್ರೀ ವಿನಾಯಕ ದೇವಾಲಯ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಮಾ.2 ರಂದು ಸಂಜೆ 6.30 ಗಂಟೆಗೆ ಭಾಗಮಂಡಲ ಸಿದ್ಧಿವಿನಾಯಕ ಭಜನಾ ಮಂಡಳಿಯಿಂದ ಕಾರ್ಯಕ್ರಮ ನಡೆಯಲಿದೆ.
ಮಾ.3 ರಂದು ಸಂಜೆ 6.30ಕ್ಕೆ ಮಡಿಕೇರಿ ಶ್ರೀ ರಾಮಾಂಜನೇಯ ಭಜನಾ ತಂಡ, ಮಾ.4 ರಂದು ಸಂಜೆ 6.30ಕ್ಕೆ ಮಡಿಕೇರಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಮಹಿಳಾ ಭಜನಾ ಸಮಿತಿ, ಮಾ.5 ರಂದು ಸಂಜೆ 6.30ಕ್ಕೆ ಮಡಿಕೇರಿ ಶ್ರೀ ಕೋದಂಡರಾಮ ದೇವಾಲಯ ಮಹಿಳಾ ಭಜನಾ ಸಮಿತಿಯಿಂದ ಭಜನಾ ಕಾರ್ಯಕ್ರಮ ಜರುಗಲಿದೆ.
ಮಾ.6 ರಂದು ಆದಿಚುಂಚನಗಿರಿ ಮಠ ರವಿ ಭೂತನಕಾಡು ಹಾಗೂ ಮಾ.7 ರಂದು ಶ್ರೀ ಹಿನ್ನಪ್ಪ ಮತ್ತು ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಪ್ರತಿದಿನ ರಾತ್ರಿ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನೆರವೇರಲಿದೆ.
ಮಾ.8 ರಂದು ಮಹಾಶಿವರಾತ್ರಿಯ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ಶ್ರೀ ಗಣಪತಿ ಹೋಮ, ಬೆಳಿಗ್ಗೆ 9.30 ಗಂಟೆಗೆ ಶ್ರೀ ಮೃತ್ಯುಂಜಯ ಹೋಮ, ರುದ್ರಾಭಿಷೇಕ, ದೇವಾಲಯದ ಈಶ್ವರಾರಾಧನೆಯ ವಿಶಿಷ್ಟ ಸೇವೆಯಾದ ಹೊರೆಕಾಣಿಕೆ ಸಮರ್ಪಣೆ ನಂತರ ಮಧ್ಯಾಹ್ನದ ಮಹಾಪೂಜೆಯ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ.
ರಾತ್ರಿ 8 ಗಂಟೆಗೆ ರುದ್ರಾಭಿಷೇಕ, 9 ಗಂಟೆಗೆ ರಂಗಪೂಜೆ ನೆರವೇರಲಿದ್ದು, ನಂತರ ಮಂಗಳೂರಿನ ಶ್ರೀ ಮಹಾದೇವನನ್ನು ಅಹೋರಾತ್ರಿ ಜಾಗರಣೆಯ ಮೂಲಕ ಆರಾಧಿಸಲು ಶ್ರೀ ಕಾಶೀ ವಿಶ್ವನಾಥೇಶ್ವರ, ಬಲಮುರಿ, ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿ, ಶ್ರೀ ರಕ್ತೇಶ್ವರಿ, ಕೃಪಾಶ್ರಿತ ಯಕ್ಷಗಾನ ಮಂಡಳಿ ವತಿಯಿಂದ “ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ” ಪೌರಾಣಿಕ ಯಕ್ಷಗಾನ ನಡೆಯಲಿದೆ.
ಮಾ.9 ರಂದು ನೈರ್ಮಾಲ್ಯ ಪೂಜೆ, ಶಿವನಿಗೆ ರುದ್ರಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 11 ಗಂಟೆಗೆ ಧಾರ್ಮಿಕ ಪ್ರವಚನ ನಡೆಯಲಿದೆ. ನಂತರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.









