ಗೋಣಿಕೊಪ್ಪ ಫೆ.24 NEWS DESK : ಪೊನ್ನಂಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ 8ನೇ ವಾರ್ಷಿಕ ಮಹಾಸಭೆಯು ಶಾಲೆಯ ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮೂಕಳೇರ ಕುಶಾಲಪ್ಪ, ಶಾಲೆಯ ಭಾವನಾತ್ಮಕ ಸಂಬಂಧದ ಬೇಸಿಗೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಚಿಂತನೆಯನ್ನು ಹಳೆಯ ವಿದ್ಯಾರ್ಥಿಗಳ ಸಂಘ ಹೊಂದಿದೆ ಎಂದರು.
ಶತಮಾನೋತ್ಸವದ ಹಿನ್ನೆಲೆ ಶಾಲೆಗೆ ಪೂರಕವಾದ ತೆರೆದ ಸಭಾಂಗಣವನ್ನು ನಿರ್ವಹಿಸಿಕೊಡಲಾಗಿದೆ. ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಳೆಯ ವಿದ್ಯಾರ್ಥಿಗಳ ಸಂಘ ಸುಮಾರು 300ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು, ಸಂಪೂರ್ಣವಾಗಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಮೂಕಳೇರ ಕುಶಾಲಪ್ಪ ಹೇಳಿದರು.
ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಸದಸ್ಯತ್ವವನ್ನು ಪಡೆಯುವ ಮೂಲಕ ಶಾಲಾ ಅಭಿವೃದ್ಧಿಗೆ, ಶಿಕ್ಷಣದ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭ ಕೋಳೆರ ಗೋಕುಲ್ ಸ್ಥಾಪಿಸಿದ ದತ್ತಿ ನಿಧಿಯನ್ನು ಹೆಚ್.ಕೆ.ಪ್ರಭು ಹಾಗೂ ಮಂಜುಳಾ ದಂಪತಿಗಳ ಪುತ್ರಿ ಸ್ನೇಹ ಎಂಬ ವಿದ್ಯಾರ್ಥಿನಿಗೆ 20 ಸಾವಿರ ರೂ. ನೀಡಲಾಯಿತು. ಅದೇ ಹಣದ ಭಾಗವಾಗಿ ರೂ. 10,000 ಹಣವನ್ನು ದಂಪತಿಗಳು ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದಿ ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿನಿಗೆ ಪ್ರೋತ್ಸಾಹಧನವಾಗಿ ನೀಡುವಂತೆ ದತ್ತಿ ನಿಧಿಯನ್ನು ಸ್ಥಾಪಿಸಿದರು.
ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿದ್ಯಾರ್ಥಿಗಳಾದ ಜೆ.ಎ ದೀಪಿಕಾ ಮತ್ತು ಜೆ.ಕೆ ಗಣೇಶ್ ಪ್ರೋತ್ಸಾಹಕರ ನಗದು ಬಹುಮಾನವನ್ನ ನೀಡಲಾಯಿತು. ಜೊತೆಗೆ ಪುಣೆಯಲ್ಲಿ ನಡೆದ ವಯಸ್ಕರ ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದ ಪೆಮ್ಮಂಡ ಅಪ್ಪಯ್ಯ ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಕಳೆದ ಸಾಲಿನ ವರದಿಯನ್ನು ವಾಚಿಸಿದರು. ಶಿಕ್ಷಕಿ ಹಾಗೂ ಸಂಘದ ನಿರ್ದೇಶಕಿ ರೋಸಿ ಆಡಳಿತ ಮಂಡಳಿಯ ವರದಿಯನ್ನು ವಾಚಿಸಿದರು. ಲೆಕ್ಕಪತ್ರ ಮಂಡನೆಯನ್ನು ದಾದು ಪೂವಯ್ಯ ನೆರವೇರಿಸಿದರು.
ಅಮ್ಮತ್ತಿರ ವಾಸುವರ್ಮ ನಿರೂಪಿಸಿದ ಮಹಾಸಭೆಯಲ್ಲಿ ಕೋಳೆರ ದಯಾ ಚಂಗಪ್ಪ, ಚೇಂದಿರ ನಿರ್ಮಲಾ ಬೋಪಣ್ಪ, ರೇಖಾ ಶ್ರೀಧರ್, ಹಿರಿಯ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಬಾನಂಡ ರಮೇಶ್, ಸ್ಥಾಪಕ ಅಧ್ಯಕ್ಷ ಚಂಗಪ್ಪ, ಮುಖ್ಯ ಶಿಕ್ಷಕಿ ಝನ್ಸಿ ಇದ್ದರು.









