ಮಡಿಕೇರಿ ಫೆ.24 NEWS DESK : ನಗರದ ತನಲ್ ಆಶ್ರಮಕ್ಕೆ ರೋಟರಿ ಮಡಿಕೇರಿ ವುಡ್ಸ್ ನಿಂದ ಗಾಲಿ ಕುರ್ಚಿಯನ್ನು ಕೊಡುಗೆಯಾಗಿ ನೀಡಲಾಯಿತು.
ತನಾಲ್ ಆಶ್ರಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ರೋಟರಿ ಮಡಿಕೇರಿ ವುಡ್ಸ್‍ನ ಪ್ರಮುಖರು ಗಾಲಿ ಕುರ್ಚಿಯನ್ನು ಹಸ್ತಾಂತರಿಸಿದರು.
ಈ ಸಂದರ್ಭ ವುಡ್ಸ್ ಅಧ್ಯಕ್ಷ ರೊ.ವಸಂತ್ ಕುಮಾರ್ ಮಾತನಾಡಿ, ರೋಟರಿಯ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವಿಸಿದರು.
ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರಿನ ಯೋಜನೆ, ಪರಿಸರ ಸಂರಕ್ಷಣೆ ಮುಂತಾದ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಮಾನವ ಸೇವೆಯೇ ಮಾಧವ ಸೇವೆ ಎಂಬಂತೆ ಆಶ್ರಮದಲ್ಲಿ ಮಾನವೀಯತೆ ಜೊತೆಗೆ ನೊಂದವರಿಗೆ ಆಸರೆಯಾಗಿ ನಿರಂತರ ಸೇವೆಯನ್ನು ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಸಲಹೆಗಾರ ರೊ. ಅನಂತ ಶಯನ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನೊಂದವರಿಗೆ ಬೆಳಕಾಗಿ ಸೇವೆ ನೀಡುತ್ತಿರುವ ತನಾಲ್ ಆಶ್ರಮದ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ರೋಟರಿ ಉಪ ರಾಜ್ಯಪಾಲ ರೊ.ದೇವಣಿರ ತಿಲಕ್ ಮಾತನಾಡಿ, “ನೊಂದವರ ಬಾಳಿಗೆ ಆಸರೆಯಾಗುವದರ ಮೂಲಕ, ಅವರ ಜೀವನದಲ್ಲಿ ಭರವಸೆಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿರುವ ರೋಟರಿ ವುಡ್ಸ್‍ನ ಕಾರ್ಯವನ್ನು ಪ್ರಶಂಸಿಸಿದರು.
ಇದೇ ಸಂದರ್ಭ ಆಶ್ರಮದ ಸಂಸ್ಥಾಪಕ ಯುತ ಮಹಮ್ಮದ್ ಅವರನ್ನು ವುಡ್ಸ್ ವತಿಯಿಂದ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ರೊ.ಪ್ರಮೀಳಾ ಶೆಟ್ಟಿ ಮಹಮ್ಮದ್ ಅವರ ಸಾಧನೆಗಳನ್ನು ಸಭೆಗೆ ಪರಿಚಯಿಸಿದರು.
ನಂತರ ರೊ. ಬಿ.ಜಿ ಅನಂತಶಯನ, ರೊ. ಪ್ರಮೀಳಾ ಶೆಟ್ಟಿ, ಮತ್ತು ರೊ.ರವಿಕುಮಾರ್ ಅವರುಗಳು ತಮ್ಮ ಮಧುರವಾದ ಹಾಡುಗಳೊಂದಿಗೆ ನೆರೆದವರನ್ನು ರಂಜಿಸಿದರು.
ರೊ.ಲೀಲಾವತಿ, ರೊ.ಧನಂಜಯ ಶಾಸ್ತ್ರಿ, ರೊ.ಝಹೀರ್ ಅಹ್ಮದ್, ರೊ.ಕಿರಣ್ ಕುಂದರ್ ಹಾಗೂ ರೊ.ಗೀತಾ ಸೂರ್ಯ ಹಾಜರಿದ್ದರು. ಕಾರ್ಯದರ್ಶಿ ರೊ.ಹರೀಶ್ ಕಿಗ್ಗಾಲ್ ವಂದಿಸಿದರು.








